Archive for the ‘Vijay prakash’ Tag

ಏನಮ್ಮಿ ಏನಮ್ಮಿ – ಅಯೋಗ್ಯ (೨೦೧೯)   Leave a comment

one of the very few good kannada movie that i watched recently, infact it was recommended by a friend particularly because of the song .

Vijay as always has done full justice, palak on the other hand is a bit tad out of sorts, nevertheless the song is very refreshing !

ಹಾಡು: ಏನಮ್ಮಿ ಏನಮ್ಮಿ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ : ಚೇತನ್ ಕುಮಾರ್ , ಗಾಯನ : ವಿಜಯ್ ಪ್ರಕಾಶ್ , ಪಲಕ್ಕ್ ಮುಚಲ್

123

ಏನಮ್ಮಿ ಏನಮ್ಮಿ
ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೂ ಕಣ್ಲ ಹೂ ಕಣ್ಲ
ನಂಗು ಹಂಗೆ ಆಯ್ತು ಕಣ್ಲ
ಪ್ರೀತಿನೇ ಹಿಂಗೆ ಕಣ್ಲ
ಸುಮ್ನೆ ಒಂದು ಮುತ್ತು ಕೊಡ್ಲ

ಬೆಳದಿಂಗ್ಳು ನೀನೆನಮ್ಮಿ
ಲಾಲಿನ ಹಾಡ್ಲೇನಮ್ಮಿ,
ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ
ದ್ರಿಷ್ಟಿನ ತೆಗಿಲೇನಮ್ಮಿ

ಚನ್ನಪಟ್ನದ್ ಗೊಂಬೆಗೆ, ಜೀವವು ಬರಲು,
ನಿನ್ನಂಗೆ ಕಾಣ್ತದೆ ನೋಡಮ್ಮಿ , ನೀ.. ಮುದ್ದು ಕಮ್ಮಿ
ಚೆಲುವಾಂತ ಚೆನ್ನಿಗ ಭೂಪತಿರಾಯ ,
ನೀನೇನೆ ಸೊಬಗು ಹೂಂ ಕಣ್ಲಾ, ನೀ ರಾಜಾ ಕಣ್ಲಾ

ನಮ್ ಪ್ರೀತಿ ಬೆಲ್ಲಕಮ್ಮಿ
ನಾವಿಬ್ರು ಯಾರಿಗ್ ಕಮ್ಮಿ

ನೀ ನಕ್ರೆ ಚಂದಾ ಕಂಡ್ಲಾ
ಈ ಜೀವ ನಿಂದೆ ಕಂಡ್ಲಾ

ಬೀರಪ್ಪನ್ ಗುಡಿ ಮುಂದೆ , ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ ,
ದಿಟ ಕಂಡ್ಲಾ , ನನ್ನಾಣೆ ಕಂಡ್ಲಾ
ಕಲ್ಲಿನ ಬಸವನು ಕಣ್ಣೊಡಿತಾನೆ
ನೀನಂದ್ರೆ ಜಾತರೆ
ಕೇಳಮ್ಮಿ, ವೈಯ್ಯಾರಮ್ಮಿ

ಕಾಲುಂಗರ ಹಾಕ್ಲೇನಮ್ಮಿ
ಹಣೆಬೊಟ್ಟು ಇಡ್ಲೇನಮ್ಮಿ
ಏನಂದ್ರು ಜಾಸ್ತಿ ಕಂಡ್ಲಾ
ನಿನ್ ಪ್ರೀತಿ ಆಸ್ತಿ ಕಂಡ್ಲಾ

ಬಿದ್ದಲ್ಲೇ ಬೇರೂರಿ , ವಾಸ್ತು ಪ್ರಕಾರ (2015)   Leave a comment

ಹಾಡು : ಬಿದ್ದಲ್ಲೇ ಬೇರೂರಿ, ಚಿತ್ರ: ವಾಸ್ತು ಪ್ರಕಾರ, ಗಾಯನ : ವಿಜಯ್ ಪ್ರಕಾಶ್ , ಸಾಹಿತ್ಯ: ಜಯಂತ್ ಕಾಯ್ಕಿಣಿ.

 

ಬಿದ್ದಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ

ನಸು ನಗುವ ಮಗು ಮನಕ್ಕೆ, ವಾಸ್ತುವೆಲ್ಲಿ

 

ಮನಸೆಂಬ ಭೂಪಟದಿ, ಗಡಿ ರೇಖೆ ಇಲ್ಲ

ಮನಸೆಂಬ ಮನೆಯಲ್ಲಿ, ಗೋಡೆ ಇಲ್ಲ

ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ

ಅಣೆಕಟ್ಟೆ ಮಾತು ಆಡಬೇಕೆ

ಬೀಸೋ ಗಾಳಿಯ ಅಲೆಗೆ, ವಾಸ್ತುವೇಕೆ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

 

ಎಂತದೇ ಇರುಳನ್ನು ದಾಟಬಹುದು , ಹಚ್ಚಿಟ್ಟ ಖಂಧಿಳು ಕೈಲಿದ್ದಾರೆ

ಹಣೆಬರಹ ಕೈಯಾರೆ ಬರೆಯ ಬಹುಧು, ಎದೆಯಲ್ಲಿ ಅಕ್ಷರವ ಬಿತ್ತಿದ್ದರೆ

ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ , ಕಿಟಿಕಿ ಬಾಗಿಲುಗಳನು ಮುಚ್ಚಬೇಕೆ

ಹಕ್ಕಿ ಗೂಡಿನ ಉಳಿಗು, ವಾಸ್ತುವೇಕೆ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತು ವೆಲ್ಲಿ

 

ಆಥ್ಮಿಯವಾದನ್ಥ ಸಂಭಂಧವೇ , ನಿಜವಾಗಿ ಮನೆಗಳ ವಿನ್ಯಾಸವು

ವಸ್ತುಗಳಿಗಿಂತ ವ್ಯಕ್ತಿಗಳನು, ಹಚ್ಚಿಕೊಂಡರೆ ಮಾತ್ರ ಸಂತೋಷವೂ

ತುತ್ತು ಕಾಣದ ಬಳಗ, ಸುತ್ತ ನಿಂತಿರುವಾಗ

ಗತ್ತು ಶ್ರೀಮಂತಿಕೆಯ, ಲೋಭವೇಕೆ

ಅಮ್ಮ ಹಚ್ಚಿದ ಒಲೆಗೆ, ವಾಸ್ತು ಬೇಕೇ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ

ನಸು ನಗುವ ಮಗು ಮನಕ್ಕೆ, ವಾಸ್ತು ವೆಲ್ಲಿ

ಮಳೆ ಮರೆತು , ಉಳಿದವರು ಕಂಡಂತೆ (2014)   Leave a comment

A gem of a song from the movie ಉಳಿದವರು ಕಂಡಂತೆ which exemplifies contemporary suffering, has terrific lyrics accompanied by patho-harmonium-tune.

ಹಾಡು : ಮಳೆ ಮರೆತು , ಚಿತ್ರ: ಉಳಿದವರು ಕಂಡಂತೆ (೨೦೧೪), ಗಾಯನ: ವಿಜಯ್ ಪ್ರಕಾಶ್ , ಸಾಹಿತ್ಯ:ವಿಗ್ನೆಶ್ವರ್ ವಿಶ್ವ , ಸಂಗೀತ :ಬಿ. ಅಜನೀಶ್ ಲೋಕನಾಥ್

ಮಳೆ ಮರೆತು, ತಾನಾಗೆ ಹಸಿರಾಗಿ, ನಿ೦ತಾಗ….  ಈ ಭೂಮಿ,
ಸಲಹೇನೇ ಕೊಡಬೇಡ, ದೇವರೇ….  ನೀನಿಲ್ಲಿ ಹ೦ಗಾಮಿ,
ಕಣ್ಣೀರೆ ನಿನ್ನ, ಸ೦ತೆಗೆ ಕರೆದಾಗ… ಬೇಜಾರಿನಲ್ಲೆ ಸಜ್ಜಾದೆಯ….
ನೋವಿರುವ ಗಾಯ, ಬೆರಳಲ್ಲೆ ಇರುವಾಗ…  ಬಿಡಿಸೋದು ಕಲಿತೆ, ರ೦ಗೋಲಿಯ….
ಮಿ೦ಚೊ೦ದು ಕಿಡಿಕಾರಿ, ಆಕಾಶ ಚೆಲುವಾಯ್ತು….  ಹೇಗೆ?
ಬೆ೦ಕಿಯ ಕಡಿಗೀರಿ, ಮನೆತು೦ಬ ಬೆಳಕಾದ….  ಹಾಗೆ…

ಆ ಚ೦ದ್ರನಿ೦ದು, ನಿದ್ದೇಲೆ ಎದ್ದು, ಕಣ್ಣುಜ್ಜಿಕೊ೦ಡು ತೇಲಿ…  ಬ೦ದ….
ತೆ೦ಗಿನಗರಿಗೆ, ತಾಗುತ್ತಾ ಹೋದ… ಊರೂರಿಗೆಲ್ಲ ಚ೦ದ.. ತ೦ದ….
ದೋಣಿಲಿ ಹುಟ್ಟಿ೦ದು ಕೈ ತಪ್ಪಲು…. ತಕ್ಷಣವೇ ನೆರವಾಯ್ತು ನಡುನೀರೇ ದಡ ನೀಡಿ
ಹಾಡೊ೦ದು ಹೊರಟಾಗ ಕಡುಗಪ್ಪಲಿ…  ರಕ್ಷಣೆಗೆ ಬ೦ದ೦ತೆ ಬೆಳಕೊ೦ದು ದನಿಗೂಡಿ…
ಎಲೆ ಮೇಲೆ ಕಾಲೂರಿ… ಹನಿಯೊ೦ದು ಹೊಳಪಾಯ್ತು…  ಇನ್ನು….
ಎ೦ದೆ೦ದೂ ಇರುವ೦ತ…  ಮಳೆಬಿಲ್ಲ ಮುಡಿದಾಯ್ತು….  ಬಾನು…

ಎಳೆಬಿಸಿಲ ನೆನಪಾಗಿ, ಅತ್ತ೦ತೆ ಇಳಿಸ೦ಜೆಯಾ..  ಹೂವು….
ನುಣುಪಾದ ಈಟೀಲಿ, ಎದೆಗೇನೆ ಇರಿದ೦ತೆ..  ಆ ಸಾವು….
ಬೇರಿರದ ಮರಕೆ, ಬಿರುಗಾಳಿ ಬಡಿದಾಗ, ಉರುಳುವ ಜಾಗ ಇರದಾಗಿದೆ…
ಬಾಯಾರಿ ಸೂರ್ಯ, ಬಿಸಿಲಾಗಿ ನಿ೦ತಾಗ, ಸಾಗರವೂ ಕೂಡ ಬರಿದಾಗಿದೆ….
ಆಳಿರದೆ ಹಾಳ್ಹಿಡಿದು, ಹೋದ೦ತೆ ಈ ಊರ.. ಕೇರಿ…
ಸುಳಿವೊ೦ದು ನೀರಿಳಿದು, ತಡೆದ೦ತೆ ನದಿ ನೀರ.. ದಾರಿ….

Andar Zero Baahar bhi Zero!!   Leave a comment

ಕೇಳ್ರಪ್ಪೋ ಕೇಳಿ Vijay Prakash in his latest interview for ‘Andar Bahaar’ said ‘Director –Phannesh’s has got an absolute special story to tell and to proceed with the story, songs are incorporated to assist the same. ಇವು,ಸಿನಿಮಾಕ್ಕೆ ಮುಂಚೆ,ಒಂದು ಅಂಥ ಹಾಡು, ಒಂದು ಇಂಥ ಹಾಡು ಎಂದು ಡಿಸೈಡ್ ಮಾಡಿ, ಕಂಪೋಸ್ ಮಾಡಿದ ಹಾಡುಗಳಲ್ಲ. Muhaha haha ha ha

Well, obviously his metamorphosis into Music director for ‘Andar Bahaar’ is compelling him to be naive and sentimental. ‘AB’ is an action film starring SRK and Parvathi Menon and the album has 5 tracks and just like a typical bollywood/sandalwood album it has An introductory title track, Love song, Patho song and Perky ones which pretty much describes; the navarasas!!!!! :D

A brief review on the album comprising of ಒಂದು ಅಂಥ ಹಾಡು, ಒಂದು ಇಂಥ ಹಾಡು..

AB

Andar Baahar of Vishal Dadalani, Suzanne D’ mello , Lyrics: A.P. Arjun
A typical song for the dude to free his arms, tap his toes, do some bille jean stuff, communicate to the audience that he indeed has five fingers and added to all of these explain what Andar baahar is all about !! check out these lines.. ಬಿರುಗಾಳಿ ಬದುಕಲ್ಲಿ ತಂಗಾಳಿ ಹುಡ್ಕೋದು ಭೂಮಿಲಿ ನಾನ್ ಒಬ್ಬನೇ !!! :D :D ಪ್ಲಸ್ ಇಂಟು ಮೈನಸ್ ಏನು ?I ’m flabbergasted!!  This is Vishal’s and Suzanne’s debut song in Kannada. Undoubtedly, they are fabulous!! However the music’s constructed with references from Bond films and from other reputed DJ’s.

Maleyali Minda of Vijay Prakash, Shreya Goshal , Lryics: Jayanth Kaykini
What an aalaap from Shreya it’s so effective that it makes you feel so vulnerable!!! And again Kaykini’s words effortlessly creates an atmosphere where one can go for scuba diving! Top-notch work from Shreya and Vijay but the music kinda lets you down, has faint traces of ARR’s Mannipaya. However, Konkani interludes are just outstanding. If this was only specific to Shreya , it would’ve been so much better!!

Aase Aase of Karthik, Anuradha Bhat, Lyrics: Kaviraj
A zulu chorus for the interludes!!! I Just don’t understand what’s really wrong with these guys, is it to heighten the senses or to make/sound glossy or pop or shift the screen to Africa and wretchedly resonate that I have these many Aases!?  It really beats me every time…. However Anuradha Bhat does bring some reprieve to a so called pepddddddd-up song.

Koneye Irada of Shankar Mahadevan, Lyrics: Jayanth Kaykini
Unquestionably, the intro and the tempo bears resemblance to Tanhayee of Dil Chahta Hai and For a change Kaykini has penned lyrics for a patho track which really disappoints. Mahadevan’s… simply brilliant and effortlessly modulates his voice to intensify SRK’s theatrical anguish.

Neenu Nanna Only Wifu of Chetan, Shamita, Lyrics: Yograj Bhat
Aw.. the archetypal ಪೋಲಿ bhatt and his rants ! Begins impressively with ಆಷಾಡಮಾಸದಲಿ ಬ್ಯಾಡ… ನಿನ್ನ ಸಹವಾಸ…. but doesn’t carry the same tempo and concludes with abysmal ಬಾಥ್ರೂಮಿನಲ್ಲಿ ಮೀಟ್ ಆಗು ನೀನು… ನೀರ್ ಸೌಂಡಿನಲ್ಲಿ ಕೆಳ್ಸೋಲ್ಲ ಏನೂ… Typical suntragali beats and this number won’t be featured in the film!! Billions of bilious blue blistering barnacles!

From an commercial view point: Vijay Prakash delivers but One can easily bring in references from other south Indian movies and relate to it. Hope he discontinues his efforts to establish himself as a music director and instead, remain being a singer. Endorse Simplicity…

My Picks:
Maleyali Minda

References:
www.gandhadagudi.com/forum/

ಮಳೆಯಲಿ ಮಿಂದ – ಅಂದರ್ ಬಾಹರ್ (2013)   Leave a comment

ಹಾಡು: ಮಳೆಯಲಿ ಮಿಂದ, ಚಿತ್ರ: ಅಂದರ್ ಬಾಹರ್ (2013), ಗಾಯನ: ವಿಜಯ್ ಪ್ರಕಾಶ್, ಶ್ರೇಯ ಗೋಶಲ್ , ಮಹಾತಿ,ಸುರಭಿ  ಸಾಹಿತ್ಯ: ಜಯಂತ್ ಕಾಯ್ಕಿಣಿ.

maleyali minda

ಮಳೆಯಲಿ ಮಿಂದ ಹೂವಿನ ಹಾಗೆ…. ಮಿನುಗುವೆ ಏಕೆ, ನನ್ನೋಲವೆ..
ಕನಸಲಿ ಕಂಡ ದೇವರ ಹಾಗೆ….  ಸೆಳೆಯುವೆ ಏಕೆ, ನನ್ನೊಲವೆ..
ಹೃದಯದ ಮಾತು… ಆಲಿಸು ಪೂರ… ಕಂಪಿಸುವಾಗ, ಈ ಕೊರಳು…
ಚಿಂತೆಯು ಕೂಡ, ನಿಂತಿದೆ ದೂರ…. ಜೊತೆಯಲಿ ಜೀವವೆ ನೀನಿರಲು….

ಮಳೆಯಲಿ ಮಿಂದ ಹೂವಿನ ಹಾಗೆ…. ಮಿನುಗುವೆ ಏಕೆ, ನನ್ನೋಲವೆ..

ನಿನ್ನಯ ರೂಪದ ರೇಖೆಯಲಿ…. ಉಸಿರಿನ ಬಣ್ಣ, ತುಂಬುವೆನು….
ನನ್ನನು ನಾನೆ ನಂಬದೆಯೆ…. ಕೇವಲ ನಿನ್ನನೆ, ನಂಬುವೆನು….
ನಗೆ ಹೂವನು ಮುಡಿಸುತ ಈ ಕ್ಷಣವೆ…. ಶುರುವಾಗಿಯೆ ಹೋಯಿತು, ಜೀವನವೆ…
ಹೋ… ನೀನಿರೊ ತನಕ, ನಾನಿರುವೆ….

ಮಳೆಯಲಿ ಮಿಂದ ಹೂವಿನ ಹಾಗೆ…. ಮಿನುಗುವೆ ಏಕೆ, ನನ್ನೋಲವೆ..

ಮೈಮನದಲ್ಲಿ ಸಡಗರವ…. ಬಚ್ಚಿಡಲಾಗದೆ, ಸೋತಿರುವೆ…
ನಿನ್ನಯ ಹಾಡಿನ ಸಾಲಿನಲಿ… ಅಚ್ಚರಿಂದಲೇ , ಕೂತಿರುವೆ….
ನಿನ್ನ ರೂಪವ ತಾಳುತ ಈ ಜಗವು…  ಅಪರೂಪದ ಸುಂದರ, ಸೋಜಿಗವು…
ನೀನಿರುವಲ್ಲೆ ನಾನಿರುವೆ…

ಮಳೆಯಲಿ ಮಿಂದ ಹೂವಿನ ಹಾಗೆ…. ಮಿನುಗುವೆ ಏಕೆ, ನನ್ನೋಲವೆ..
ಕನಸಲಿ ಕಂಡ ದೇವರ ಹಾಗೆ….  ಸೆಳೆಯುವೆ ಏಕೆ, ನನ್ನೊಲವೆ..
ಹೃದಯದ ಮಾತು… ಆಲಿಸು ಪೂರ… ಕಂಪಿಸುವಾಗ, ಈ ಕೊರಳು…
ಚಿಂತೆಯು ಕೂಡ, ನಿಂತಿದೆ ದೂರ…. ಜೊತೆಯಲಿ ಜೀವವೆ ನೀನಿರಲು….

ನೀನು ನನ್ನ ಓನ್ಲಿ ವೈಫು – ಅಂದರ್ ಬಾಹರ್ (2013)   Leave a comment

ಹಾಡು: ನೀನು ನನ್ನ ಓನ್ಲಿ ವೈಫು , ಚಿತ್ರ: ಅಂದರ್ ಬಾಹರ್ (2013), ಗಾಯನ: ಚೇತನ್, ಶಮಿತಾ  ಸಾಹಿತ್ಯ: ಯೋಗರಾಜ್ ಭಟ್ಟ್

ನೀನು… ನನ್ನ…… ಓನ್ಲಿ ವೈಫು….
ಆದ್ರೂ ಯಾಕೆ… ಇಂಥ ಗ್ಯಾಪು… ಗ್ಯಾಪು… ಗ್ಯಾಪು… ಗ್ಯಾಪು….

ಆಷಾಡಮಾಸದಲಿ ಬ್ಯಾಡ… ನಿನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ…. ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು… ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು… ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ.. ಸ್ಟಾರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ…. ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ಲುಕ್ ಮಿ…. ಡೋಂಟ್ ಯು ಟಚ್ ಮಿ..
ಡೋಂಟ್ ಯು ಕಿಸ್ಸ್ ಮಿ…. ಡೋಂಟ್ ಯು ಲವ್ ಮಿ..

ಸಿಗ್ನಲ್  ಜಂಪಾದ್ರೆ… ಅಪಗಾಥನೇ ಪಕ್ಕಾ….
ಮದುವೆನೇ ಆದ್ಮೇಲೆ… ಅಪಗಾಥಕ್ಕೆಯಾವ್ಲೆಕ್ಕ….
ನಿಮ್-ಅಪ್ಪ ನಿಮ್-ಅಮ್ಮ ಇರ್ತಾರೆ ಅಕ್ಕಪಕ್ಕ…
ನೋಡ್ತಾರೆ ನಮ್ಮನೆ ಬೆಳಕು ಹರ್ಯೋತಂಕ…
ನಾ ಬಂದು ನಿಂಥಿವ್ನಿ ನಿನ ಕಿಟಕಿ ಪಕ್ಕ..
ಹೊಡಿ ನೀನು ಸೊಳ್ಳೆನ ಬೆಳಕು ಹರ್ಯೋತಂಕ…
ನೀನು… ನನ್ನ…… ಓನ್ಲಿ ವೈಫು….
ಅರೆರೆರೇ…. ಆದ್ರೂ ಯಾಕೆ… ಇಂಥ ಗ್ಯಾಪು…

ಕದ್ದುತಿನ್ನೋ ಹಣ್ಣು…. ಸಿಕ್ಕಾಪಟ್ಟೆ ಟೇಸ್ಟು …
ಗೋದ್ರೆಜ್ ಬೀರೂ-ಒಳ್ಗೆ… ಹಾಡಾಡುವ ಡುಯೆಟು…
ಅಪ್ಪ ಅಮ್ಮ ಬಂದ್ರೆ  ಕೆಡಬಹುದು ಕೆಲ್ಸ….
ಕ್ವಿಕ್ ಆಗಿ ಅಪ್ಪಿಕೋ ಎರಡುವರೆ ನಿಮಿಷ…
ಬಾಥ್ರೂಮಿನಲ್ಲಿ ಮೀಟ್ ಆಗು ನೀನು…
ನೀರ್ ಸೌಂಡಿನಲ್ಲಿ ಕೆಳ್ಸೋಲ್ಲ ಏನೂ…

ಡೋಂಟ್ ಯು …. ಡೋಂಟ್ ಯು ಲುಕ್ ಮಿ…. ಡೋಂಟ್ ಯು ಟಚ್ ಮಿ..
ಆಷಾಡಮಾಸದಲಿ ಬ್ಯಾಡ… ನಿನ್ನ ಸಹವಾಸ….
ಏನಾದ್ರು ಬೇರೆ ಹೇಳಬ್ಯಾಡ….  ನಂಗ್-ಈ ಉಪವಾಸ….
ಎಷ್ಟ್-ಒಳ್ಳೆ ಮನ್ಸಾನಾನು… ನೀನು ದೂರ ಇರ್ಬದೋದ….
ಬೇಕಿದ್ದ್ರೆ ಮೀಸೆ ಕೊಡು… ಮನೆಗೆ ಮಾತ್ರ ಬರಬ್ಯಾಡ….
ಮುಂದೇನು ಹೇಳು ಹುಡ್ಗಿ… ಸ್ಟಾರ್ಟ್ ಅಗೊಯ್ಥ್ ಮಳೆಗಾಲ….
ನಮ್ಮಕಡೆಯಂಥೂ…. ಈಗ ಸಿಕ್ಕಾಪಟ್ಟೆ ಬರಗಾಲ….
ಡೋಂಟ್ ಯು ….
ಎಹ್ ಹೋಗಮ್ಮೋ….

ಕೊನೆಯೇ ಇರದ – ಅಂದರ್ ಬಾಹರ್ (2013)   Leave a comment

ಹಾಡು: ಕೊನೆಯೇ ಇರದ , ಚಿತ್ರ: ಅಂದರ್ ಬಾಹರ್ (2013), ಗಾಯನ: ಶಂಕರ್ ಮಹಾದೇವನ್ , ಸಾಹಿತ್ಯ: ಜಯಂತ್ ಕಾಯ್ಕಿಣಿ.

ಕೊನೆಯೇ ಇರದ, ಮೊದಲಾ ಪದವೇ.. ಏಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ… ಏಲ್ಲಿ ನೀನು…
ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…
ಕೊನೆಯೇ ಇರದ, ಮೊದಲಾ ಪದವೇ.. ಏಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ… ಏಲ್ಲಿ ನೀನು…

ಹತಾಶನಾಗಿ ನಾನಿದ್ದೆ, ಮುಖವಾಡವನ್ನು…  ಕಣ್ಣಿರಿನಿಂದ ಅಳಿಸುತ್ತಾ…
ಅಪ್ಪೂರ್ವವಾಗಿ ಆರಂಭವಾದ, ಹಾಡನ್ನು….
ಅಪೂರ್ಣವಾಗಿ, ನನ್ನಲ್ಲೇ ಬಿಟ್ಟು ಹೋದೆ…..ಹೀಗೇಕೆ….
ಬೇಗ… ನೀ ಬಂದು, ಇನ್ನೊಮ್ಮೆ ಕೂಗು…. ಮನಬಂದಂತೆ ನನ್ನನು…

ಕೊನೆಯೇ ಇರದ, ಮೊದಲಾ ಪದವೇ.. ಏಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ… ಏಲ್ಲಿ ನೀನು…

ಆಕಾಶ ಬುಟ್ಟಿ ನೀನಾದೆ , ಎದೆಯಾಳದಲ್ಲಿ… ನಕ್ಷತ್ರದಂತೆ ಹೊಳೆಯುತ್ಥಾ…
ಏಕಾಂಗಿಯಾಗಿ ನಾನಿದ್ದರುನೂ, ಸೊನ್ನೇನೆ….
ನಿನ್ನೊಂದಿಗೆನೆ ನನ್ನೆಲ್ಲಾ ಮಾತು-ಗೀತು , ಸಂಸಾರ.. ಹೀಗೆ… ಆದಾಗ..
ನನ್ನ ಲೋಕವಾಗಿ… ಇರು ಎಂದೆಂದು ನೀನಿನ್ನೂ…

ಕೊನೆಯೇ ಇರದ, ಮೊದಲಾ ಪದವೇ.. ಏಲ್ಲಿ ನೀನು..
ಮೊದಲೇ ಅರಿದ, ಕೊನೆಯ ಪುಟವೇ… ಏಲ್ಲಿ ನೀನು…
ಕೆಣಕಿ….. ಹೋದೆ…
ಕನಸೇ…. ಬಿಡಲಾರೆ ನಾ ನಿನ್ನನ್ನು…

%d bloggers like this: