Archive for the ‘sonu nigam’ Tag

ಬೇಸರ ಕಾತರ, ವಾಸ್ತು ಪ್ರಕಾರ (2015)   Leave a comment

ಹಾಡು : ಬೇಸರ ಕಾತರ , ಚಿತ್ರ: ವಾಸ್ತು ಪ್ರಕಾರ, ಗಾಯನ : ಸೋನು ನಿಗಮ್ , ಸಾಹಿತ್ಯ: ಯೋಗರಾಜ್ ಭಟ್ಟ್

 

ಬೇಸರ , ಕಾತರ, ಗಡ್ಡ, ಹಳೇ ಹಾಡು

ಈ ಥರ ಸೋತರೆ, ಕಷ್ಟ ಉಳಿಯೋದು

ನಿಂತ ಸ್ನಾನ, ಕುಂತು ಸ್ವಪ್ನ

ತುಂಟ ಮೌನ, ಒಂಟಿ ಜೀವ್ನ

ನಿಂತ ಸ್ನಾನ, ಕುಂತು ಸ್ವಪ್ನ

ತುಂಟ ಮೌನ, ಒಂಟಿ ಜೀವ್ನ

ಇರಬಹುದೇ ಇದು ಪ್ರೇಮಾರಂಬದ

ಮೊದ ಮೊದ ತಲ್ಲಣ, ಕಿಡಿಗೇಡಿ ಲಕ್ಷಣ

ಬೇಸರ , ಕಾತರ, ಗಡ್ಡ, ಹಳೇ ಹಾಡು

 

ಪೆಂಗ ಪಾಂಡವರನ್ನು , ಒಂದೇ ಹುಡುಗನಲಿ

ಹುಡುಕುವರು ಹುಡುಗಿಯರು

ಪಕ್ಕ ನಿಂತವನನ್ನು, ಹೆಸರು ನೆನಪಿದ್ದರು

ಮರೆತಂತೆ ಕರೆಯುವರು

ವಾರೆ ನೋಟದಲಿ ಇವರ, ಫೋಕುಸ್ಸು ಜಾಸ್ತಿ

ಅದನ್ನ ನಾವ್ ಅಂದುಕೊಳ್ಳೋದು, ಶುರುವಾಯ್ತು ಪ್ರೀತಿ

ಒಂದೇ ಸಲ ಕುಡಿಯೊಡೆದ, ನೋವೆಲ್ಲಾ ನಮದು

ಸ್ಪಂಧಿಸಲು ರೆಡೀ ಇರದ , ಹೂವೆಲ್ಲ ನಿಮದು

ಬೇಸರ , ಕಾತರ, ಗಡ್ಡ, ಹಳೇ ಹಾಡು

 

ಧಸ್ವಾಳ ಲಂಗಗಳು, ಪುಟ್ ಪುಟ್ಟ ಟಾಪುಗಳು

ಇನ್ನೇನು ಬೇಕು, ನಾವ್ ಬದುಕಲು

ಬಡಪಾಯಿ ಹರೆಯದಲಿ, ಪಡಪೋಶಿ ಮಿಡಿತಗಳು

ಪ್ರೇಮಾತಿಶಯ ಸೂಸುಸವಕಲು

ತಿಳಿದು ಕೊಳ್ಳಲು ಹೋಗಿ, ಹುಡುಗಿಯರ ಮನದಾಳ

ಎಳೆದು ಕೊಂಡೆವು ಎದೆಗೆ, ಆರ್ಥಿಕ ಬರಗಾಲ

ಒಳಗ್ ಒಳಗೆ ತಿಳಿಯದಲೇ, ಒಳ ಬಂತು ನಲುಮೆ

ಒಟ್ಟಿನಲಿ ನಮದಲ್ಲ, ಇದು ನಿಮ್ಮ ಮಹಿಮೆ

ಬೇಸರ , ಕಾತರ, ಗಡ್ಡ, ಹಳೇ ಹಾಡು

ಈ ಥರ ಸೋತರೆ, ಕಷ್ಟ ಉಳಿಯೋದು

ಸದಾ ನಿನ್ನ ಕಣ್ಣಲಿ, ಬಚ್ಚನ್ (2013)   Leave a comment

I am really in awe of Jayanth Kaykini’s writing ability , and his fervent penchant for romantic magnificence and this song illustrates the same, forget my heart goes dhim tana na, forget bare bare, forget mein mar java, mein mit java and lastly forget the queer post-smitten-air-grabbing-body-stretching movements of sudeep, instead delve into the luxurious side of words, words that degenerates sulking, that which disseminates its bimba on to you,  in addition, Shreya and Nigam have beautifully rendered their voices and this number makes one of the greatest post modern duets (kannada) of all time.

sadaninnakannali

ಹಾಡು: ಸದಾ ನಿನ್ನ , ಚಿತ್ರ: ಬಚ್ಚನ್ (2013) , ಗಾಯನ : ಶ್ರೇಯಾ ಘೋಷಲ್ , ಸಾಹಿತ್ಯ : ಜಯಂತ್ ಕಾಯ್ಕಿಣಿ, ಸಂಗೀತ : ವಿ. ಹರಿಕೃಷ್ಣ

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ , ತಯಾರಾದೆ ನಾನು..
ನಿನ್ನದೇ ಗುರುತು.. ಕಣ್ಣಲ್ಲೇ ಕುಳಿತು..
ನನ್ನೆದೆಯ ಸ್ಥಿತಿಯೇ ನಾಜೂಕು..
ನಿನಗೆಂದೇ ಬಾಳುವೆ, ಹಟ ಮಾಡಿ ನಾನು..
ಓಹ್, ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

ಬಲು ಭಾವುಕ ಬದಲಾವಣೆ, ನನ್ನಲ್ಲಿ ನೀ ತಂದೆ.. ಈಗ
ಅಲೆದಾಡುವ ಅಪರೂಪವ, ನಿನ್ನಲ್ಲಿ ನಾ ಕಂಡೆ.. ಓಹ್ ಓ..
ನೀನೇ ಬಣ್ಣ ನೀನೇ ನಕಾಶೆ..
ನೀನೇ ನನ್ನ ದಿವ್ಯ ದುರಾಸೆ..
ನೀನೇ ವಾರ್ತೆ ನೀನೇ ವಿಹಾರ..
ನೀನೇ ದಾರಿ ನನ್ನ ಬಿಡಾರ..
ನೆನಪಾದರೆ ಸಾಕು, ಎದುರು ನೀನೇ ಬೇಕು..
ಬಿಡಲಾರೆ ನಿನ್ನನು, ಸಲೀಸಾಗಿ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ಮರುಳಾಗಿ ಹೋದೆನು ಸುಮಾರಾಗಿ ನಾನು..

ಕನಸನು ಗುಣಿಸುವಂತ , ನೆನಪನು ಎಣಿಸುವಂಥ… ಹೃದಯದ ಗಣಿತ ನೀನು..
ನನ್ನ ಜೀವ ನಿನ್ನ ಸಮೀಪ..
ಬೇರೆ ಏನು ಇಲ್ಲ ಕಲಾಪ..
ನೀನೇ ಮೌನ ನೀನೇ ವಿಲಾಸ…
ನೀನೇ ನನ್ನ ಖಾಯಂ ವಿಳಾಸ..
ಬಳಿ ಇದ್ದರೆ ನೀನು, ಮರಳಬಾರದಿನ್ನು..
ನಿನ್ನನ್ನೇ ನಂಬುತ, ಬಚಾವಾದೆ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

ಕಣ್ಣ ಮಿಂಚೇ, ವಿಕ್ಟರಿ (2013)   2 comments

Disregard the integrated music, ignore its fancy interludes but do not overlook the lyric and singing prowess.  ಕಣ್ಣ ಮಿಂಚೇ exclusively stands out because of Nigam’s ultra-fine modulation mastery, with rising and lowering tones , he adds subtlelity, that quality of elegance in emphasizing words and makes it look so easy.. which in-fact is a pretty tough song to sing.

ಹಾಡು : ಕಣ್ಣ ಮಿಂಚೇ,  ಚಿತ್ರ : ವಿಕ್ಟರಿ (೨೦೧೩) , ಗಾಯನ: ಸೋನು ನಿಗಮ್ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ: ಜಯಂತ್ ಕಾಯ್ಕಿಣಿ

ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಾನೇ ಮುಂಚೇ …  ಹೋದೆ ಸೋತು, ಚಿಗುರುವ ಪ್ರಣಯಕೆ ..
ನನಗು….  ನಿನಗೂ… ಒಲವಾ-ಗಿರಲು, ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ  (x೩)

ಮನಸಿನ ಗೋಡೆ ಮೇಲೆ, ಹಲವಾರು ಬಣ್ಣದಲ್ಲಿ , ನಿನದೇನೆ ಸಾಲು.. ಚಿತ್ರೋತ್ಸವ…
ನೆನಪಾಗುವಾಗ ನೀನು, ನಗುತೀನಿ ಒಂಟಿಯಾಗಿ, ನಿನಗುನು ಹೇಗೆ , ಆಗೋಲ್ಲವಾ…
ಇರುವಾಗ… ಇದು ಈಗ.. , ನನ್ನ ಕಣ್ಣಿ ನ ನಂಬಲಾರೆ…
ಎದೆಯ….ಕದವ, ತೆರೆದೇ ….  ಇರಲು, ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ

ಜೊತೆಯಲ್ಲಿ ಸಣ್ಣಪುಟ್ಟ, ಖುಷಿಯನ್ನು ಹಂಚಿಕೊಂಡು , ಅಲೆವಾಗ ಬಾಳು… ಆಕರ್ಷಕ…
ನಿನಗೆಂದೇ ಎಲ್ಲಾ ಬಿಟ್ಟು , ಮರುಳಾದೆ ನಾನು ಎಂಬ, ಅಪವಾದ ಕೂಡ …. ರೋಮಾಂಚಕ..
ನಿಜವಾಗು…ನಿನಗಿಂತ… ತುಸು ಹೆಚ್ಚೇ.. ನಿನ್ನ ಹಚ್ಚಿಕೊಂಡೆ ..
ಹಿಡಿದ… ಬೆರೆಳು, ಬಿಗಿಯಾ-ಗಿರಲು ….  ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ  (x೩)

ಅಂದಾಜೇ ಸಿಗುತಿಲ್ಲ , ಟೋನಿ (2013)   Leave a comment

ಹಾಡು : ಅಂದಾಜೇ ಸಿಗುತಿಲ್ಲ , ಚಿತ್ರ : ಟೋನಿ (2013) , ಗಾಯನ: ಸೋನು ನಿಗಮ್, ಸುನಿಧಿ ಚೌಹನ್, ಸಂಗೀತ: ಸಾಧು ಕೋಕಿಲ , ಸಾಹಿತ್ಯ: ಜಯಂತ ಕಾಯ್ಕಿಣಿ

ಒಹ್.. ಅಂದಾಜೇ ಸಿಗುತಿಲ್ಲ, ಓ ಅಂದಗಾತೀ.. ಸೆಳೆತಕೆ ನಾ, ಸಿಕ್ಕ ಮೇಲೆ…
ಒಹ್.. ಅಂದಾಜೇ ಸಿಗುತಿಲ್ಲ, ಓ ಅಂದಗಾರಾ.. ಬಲೆಯಲಿ ನಾ, ಬಿದ್ದ ಮೇಲೆ…
ಒಹ್ ಒಹ್.. ಒಂದೇ ಮನಸು, ಒಂದೇ ಕನಸು, ಎಂಥಾ ಸೊಗಸು..
ಕುಣಿಯುತಿದೆ ಹೃದಯಾ… ಕುಣಿಯುತಿದೆ ಹೃದಯಾ
ಕರಗುತಿದೆ ಸಮಯಾ… ಕರಗುತಿದೆ ಸಮಯಾ
ತಡೆಯುವುದು ಸರಿಯಾ.. ತಡೆಯುವುದು ಸರಿಯಾ
ಒಹ್… ಅಂದಾಜೇ ಸಿಗುತಿಲ್ಲ, ಓ ಅಂದಗಾರಾ.. ಬಲೆಯಲಿ ನಾ, ಬಿದ್ದ ಮೇಲೆ…

ಒಹ್.. ಹೊಸಾ ಹೊಸಾ, ಗುರಿಯೆಡೆ, ಖುಷಿಯಲಿ ಹಾರಲು… ಕೊಡುವೆಯಾ, ಗರಿಯನು, ಈಗಲೇ..
ಅಹ್… ಮನದಲಿ, ಅರಳಿದಾ, ಹಕ್ಕಿಯಾ ಹಾಡನು.. ಎದೆಯಲಿ, ಒರಗಿ-ನಾ… ಕೇಳಲೇ..
ಒಹ್ ಒಹ್… ಜೀವದಲ್ಲಿ ಜೋರಾಗಿದೆ, ನೀಬೇಕು ಎಂಬಾ, ಹಟ..
ಮರುಳಾದ ಮೇಲೀಗ, ಮರೆಯೇತಕೆ…
ಒಹ್.. ಒಂದೇ ಪುಲಕ, ಒಂದೇ ತವಕ, ನಿನ್ನ ತನಕ…
ಕುಣಿಯುತಿದೆ ಹೃದಯಾ… ಕುಣಿಯುತಿದೆ ಹೃದಯಾ
ಕರಗುತಿದೆ ಸಮಯಾ… ಕರಗುತಿದೆ ಸಮಯಾ
ತಡೆಯುವುದು ಸರಿಯಾ.. ತಡೆಯುವುದು ಸರಿಯಾ
ಒಹ್.. ಅಂದಾಜೇ ಸಿಗುತಿಲ್ಲ, ಓ ಅಂದಗಾತೀ.. ಸೆಳೆತಕೆ ನಾ ಸಿಕ್ಕ ಮೇಲೆ… ಸಿಕ್ಕ ಮೇಲೆ…

ಒಹ್.. ಲೋಕವೇ ಕಾಣದ, ಕೇಳದ ಪ್ರೀತಿಗೆ .. ಬರೆಯುವ ನೂತನ, ಧಾಕಲೆ..
ಒಹ್.. ಒಹ್.. ಗಾಳಿಗೆ ಕೆದರಿದ, ನಿನ್ನಯ ಕೂದಲ.. ಸುಮ್ಮನೆ ಬೆರಳಲಿ, ಸೋಕಲೇ..
ಒಹ್ ಒಹ್.. ಸಣ್ಣ ಆಸೆ ನೂರಾರಿದೆ, ಸಂಚಾರ ಇನ್ನು ಇದೆ..
ಇನ್ನಾಯಾರಿಗಿ-ಭಾಗ್ಯ , ನಮಗಲ್ಲದೆ…
ಒಹ್.. ಮತ್ತೆ ನಲಿವು , ಮತ್ತೆ ಗೆಲುವು, ಎಲ್ಲ ಸಲವೂ….
ಕುಣಿಯುತಿದೆ ಹೃದಯಾ… ಕುಣಿಯುತಿದೆ ಹೃದಯಾ
ಕರಗುತಿದೆ ಸಮಯಾ… ಕರಗುತಿದೆ ಸಮಯಾ
ತಡೆಯುವುದು, ಸರಿಯಾ..

ಸೌಂದರ್ಯ ಸಮರ – ಕಡ್ಡಿಪುಡಿ (2013)   Leave a comment

Tantalizingly ambivalent!

Oh Boy! The lyrics has that ಉನ್ಮಾದ , beauty and the embeddedness which leads to a devastating ethereal experience and it is simply brilliant because of the duality it encloses (It took me a while to finally get it), Terrific Work from Yograj Bhatt who faithfully pays tribute to the mysterious sensuality of the woman. Vani Harikrishna’s soul-stirring aalaap lays an amazing platform for Nigam to display his ever-amazing symphonious skill. For the dance sequence Aindrita Ray will be seen in a classical avatar (Kathak) and I’m eagerly looking forward to it!

ಹಾಡು: ಸೌಂದರ್ಯ ಸಮರ , ಚಿತ್ರ: ಕಡ್ಡಿಪುಡಿ , ಗಾಯನ: ಸೋನು ನಿಗಮ್ , ಸಾಹಿತ್ಯ: ಯೋಗರಾಜ್ ಭಟ್ಟ್, ಸಂಗೀತ : ವಿ.ಹರಿಕೃಷ್ಣ

saundarya_samara

ಸೌಂದರ್ಯ ಸಮರ… ಸೋತವನೆ ಅಮರ…
ಸೌಂದರ್ಯ ಸಮರ… ಸೋತವನೆ ಅಮರ….
ಕಳೆದುಕೊಳಲ್ಲು ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ… ಕಳೆದು ಪಡೆದುಕೊಳ್ಳಿ…
ಅಮಲುಗಣ್ಣಿಗೆ ಇವಳು ಸದಾ, ಸುಂದರ ಗಾಂಧಾರಿ…
ಅದತಿಳಿದ ಮದನಾರಿ, ಅತಿವಿರಹಿ ವ್ಯಾಮೋಹಿ…
ಸುಡುತಿರುವ ಸಾರಾಯಿ, ಮೃದುಮಧುರ ಮಹಾಕಾಳಿ….

ಈ ಒದ್ದೆ, ಈ ಮುದ್ದೆ-ಕೊಲ್ ಮಿಂಚಿನ ಹೆಸರೇನು…
ಮೂರು ನರುಕವ ಕಂಡ, ಮುದ್ದ ಚತುರ ಸಖಿಯು….
ನಟ್ಟ ನಡುಭೀದಿಯಲ್ಲಿ, ಮಿರಿದ ಡೇರಿ ಹೂವು…
ಸಿಕ್ಕರೂ ಸಿಗಳು , ಇದ್ದರು ಇರಳು, ಇವಳದೇ ಹಗಲು , ಇವಳದೇ ಇರುಳು….
ಸೌಂದರ್ಯ ಸಮರ… ಸೋತವನೆ ಅಮರ..
ಸೌಂದರ್ಯ ಸಮರ… ಸೋತವನೆ ಅಮರ..
ಕಳೆದುಕೊಳಲ್ಲು ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ… ಕಳೆದು ಪಡೆದುಕೊಳ್ಳಿ…

ಕಾಮನೆಯ ಜೇನಿಗೆ, ಕವಣೇ-ಬೀಸಿದ ರಮಣಿ….
ಕಣ್ಣು, ಕಣ್-ನೈದಿಲೆಯೋ, ವಾತ್ಸಲ್ಯ ಸೆಲೆಯೋ..
ಉಕ್ಕೋ, ಉನ್ಮಾದ-ದೇಹ…  ಮನ್ಮಥನ ಬಲೆಯೋ…
ದೇಹ ದೇಗುಲ.. ಈ ದೇಹ ದೇಗುಲ….
ದೇಹ ದೇಗುಲ.. ಈ ದೇಹ ದೇಗುಲ….
ಸೌಂದರ್ಯ ಸಮರ…
ಸೋತವನೆ ಅಮರ…
ಸೌಂದರ್ಯ ಸಮರ…
ಸೋತವನೆ ಅಮರ..
ಕಳೆದುಕೊಳಲ್ಲು ಬೇರೇನೂ, ಇಲ್ಲಾ ಇಲ್ಲಿ…
ಇರುವುದನೆ ಪಡೆದು, ತಿರುಗಿ ಕಳೆದುಕೊಳ್ಳಿ… ಕಳೆದು ಪಡೆದುಕೊಳ್ಳಿ…

ಬಾನಲಿ ಬದಲಾಗೋ – ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013)   Leave a comment

ಹಾಡು: ಬಾನಲಿ ಬದಲಾಗೋ , ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013), ಗಾಯನ: ಸೋನು ನಿಗಮ್ , ಸಾಹಿತ್ಯ: ಸಿದ್ದು ಕೋಡಿಪುರ

ಏರುಪೇರಾಯಿತು ನೆಟ್ಟಗಿದ್ದ ನನ್ನ ಹೃದಯ , ಇಲ್ಲಿಂದ ಶುರು ಪ್ರೀತಿ ವ್ಯವಸಾಯ….

ಬಾನಲಿ ಬದಲಾಗೋ , ಬಣ್ಣವೇ ಭಾವನೆ…
ಹೃದಯುವು ಹಗುರಾಗಿ , ಹಾರುವ ಸೂಚನೆ…
ಮನದ ಹೂ ಬನದಿ, ನೆನಪೇ  ಹೂವಾಯ್ತು…
ಅದೇ ಮಾತು.. ಅದೇ ನೋಟ… ಮರೆಯದೆ ಕಾಡಿದೆ..
ಅದೇ ಗಾನ… ನಗೆ ಬಾಣ.. ಎದೆಯಲಿ ನಾಟಿದೆ…

ಮನದಿ ಏನೋ , ಹೊಸ ಗಲಭೆ ಶುರುವಾಗಿದೆ…
ಮರೆತೇ ಏಕೆ , ಬಳಿ ಬಂದು ಸರಿಮಾಡದೆ…
ಗೆಳತಿ ನನ್ನ ಗೆಳತಿ, ತೆರೆದೇ ಮನದ ಕಿಟಕಿ…
ಕರುಣಿಸು ಪ್ರೇಮಧಾರೆ , ಬಯಕೆಯ ತೋರದೆ…
ಅದೇ ಮಾತು… ಅದೇ ನೋಟ… ಮರೆಯದೆ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

ಸರದಿಯಲ್ಲಿ….. ಹೊಸ ಬಯಕೆ, ಸರಿದಾಡಿದೆ…
ಹರಸಿ ಬೇಗ , ಕರೆಮಾಡು ತಡಮಾಡದೆ…
ಹುಡುಕಿ ನನ್ನ ಹುಡುಕಿ…. ನಟಿಸು, ಕಣ್ಣ ಮಿಟುಕಿ…
ಗಮನಿಸು ಪ್ರೇಮ ಭಾಷೆ, ಪದಗಳ ನೋಡದೆ….
ಅದೇ ಮಾತು… ಅದೇ ನೋಟ… ಮರೆಯದೆ ಕಾಡಿದೆ…
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ…

ಬಾನಲಿ ಬದಲಾಗೋ , ಬಣ್ಣವೇ ಭಾವನೆ…
ಹೃದಯುವು ಹಗುರಾಗಿ , ಹಾರುವ ಸೂಚನೆ…
ಮನದ ಹೂ ಬನದಿ, ನೆನಪೇ ಹೂವಾಯ್ತು …
ಅದೇ ಮಾತು.. ಅದೇ ನೋಟ… ಮರೆಯದೆ ಕಾಡಿದೆ..
ಅದೇ ಗಾನ… ನಗೆ ಬಾಣ.. ಎದೆಯಲಿ ನಾಟಿದೆ…

%d bloggers like this: