Archive for the ‘Dr Rajkumar’ Tag

Unforgettable dialogues – Babruvahana – Battlefield Jugalbandi   Leave a comment

The dialogues from the movie ‘Babruvahana’ is delivered with such panache and style that it is simply one of the very best ever! It perfectly justifies the title that Dr Raj earned – “Nata sarvabhouma”, the dialogues are so in widely held that in popular culture it is still a benchmark for a theater audition. The richness of words and its delivery, the expressions associated, the genius of Dr.Raj makes it look so easy, asserting that he is one of the greatest artists who ever lived.

Dialogues and Song lyrics for Babruvaha were from Hunasooru Krishna Murthy and are still remembered. Also, Dr.Raj’s and PB Srinivas’s ‘Yaaru thiliyaru Ninna Bhujabalada’, is an act of battlefield jugalbandi :)

Perhaps the only negative observation is that, Dr. Raj switches the conversation to colloquial kannada after the song  ‘Yaaru ballaru ninna’.

crop_480x480_95890 (2)

ಬಭ್ರುವಾಹನ : ಏನು ಪಾರ್ಥ.?!? ಅಹ್.. ಹಹಃ … ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. .. ಈಗ ಆ ಶಕ್ತಿ ನಿನ್ನಲ್ಲಿಲ್ಲ…. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಹ್ಞೂ ,ಎತ್ತು ನಿನ್ನ ಗಾಂಢೀವ… ಹೂಡು ಪರಮೇಶ್ವರನು ಕೊಟ್ಟ…ಆ…… ನಿನ್ನ ಪಾಶುಪತಾಸ್ತ್ರ…. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ…. ಅಥವಾ, ಶಿವನನ್ನು ಗೆದ್ದೇ… ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.

ಅರ್ಜುನ : ಮದಾಂಧ!! ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ!! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ….. ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ…

ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ

ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ…..

ಬಭ್ರುವಾಹನ : ಓಹೊಹೊಹೊ ಉಗ್ರಪ್ರತಾಪಿ ಆ! ಹಃ ಹಃ
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ…

ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ

ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ

ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ

ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ, ಪತಿವ್ರತೆಯೋ.. ಎಂದು ನಿರ್ಧರಿಸಲೇ ಈ ಯುದ್ದ.

ಅರ್ಜುನ : ಮುಗಿಯಿತು ನಿನ್ನ ಆಯಸ್ಸು

ಬಭ್ರುವಾಹನ : ಅದನ್ನ ಮುಗ್ಸೋದಕ್ಕೆ ಯಾರ್ ಇದಾರೆ ನಿನ್ ಸಹಾಯಕ್ಕೆ
ಶಿಖಂಡಿ ನಾ ಮುಂದೆ ನಿಲ್ಸಿ ಭಿಶ್ಮನ್ನ ಕೊಂದ-ಹಾಗೆ, ನನ್ನನ್ನ ಕೊಲ್ಲೊದಕ್ಕೆ ಇಲ್ಲಿ ಯಾವ್ ಶಿಖಂಡಿನು ಇಲ್ಲ!
ಧರ್ಮರಾಯರ ಬಾಯಲ್ಲಿ ಅಬಧ್ಹ ನುಡ್ಸಿ, ದ್ರೋಣಾಚಾರ್ಯರ ಕೊಂದಹಾಗೆ, ನನ್ನನ ಕೊಲ್ಲಲು, ಸುಳ್ಳು ಹೇಳೋಕೆ ಧರ್ಮರಾಯ ಇಲ್ಲಿಲ್ಲ …
ರಥದ ಚಕ್ರ ಮುರ್ದಿದ್ದಾಗ, ಕವಚ ಕುಂಡಲಗಳ ದಾನ ಪಡೆದು, ಕರ್ಣನ ಕೊಲ್ಲ್ಸಿದ್ಧಾಗೆ, ನನ್ನನ ಕೊಲ್ಲ್ಸೋದಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ,

ಇರೋದು ಪತಿವ್ರತೆಯ ಮಗನಾದ ನಾನು.. ಮಿತ್ರ ಧ್ರೋಹಿಯದ ನೀನು ..
ನಿಶ್ಕ್ಥವದ ಅಸ್ತ್ರಗಳ ಪ್ರಯೋಗದಿಂದ, ವೃಥಾ ಕಾಲಹರಣ ಮಾಡಬೇಡ ವೀರ …
ಕರೆ ನಿನ್ನ ಕೃಷ್ಣನನ್ನ , ಅವನು ಬಂದು ಸಾರಥ್ಯವಹಿಸಲಿ, ಅವನ ಮುಂದೆ, ನಿನ್ನ ಪ್ರಾಣವನ್ನು ಅವನ ಪದಾರವಿಂದಗಳಲ್ಲಿ ಅರ್ಪಿಸುತ್ತೇನೆ.. ಹನ್ ಛೇಡಿಸು… ಕೂಗು ಯದುನಂದನ ಎಂದು …

ಅರ್ಜುನ : ಅಹ್! ನಿಂನಥಹ ತುಚ್ಚ ಮಾನವನ ಧ್ವಂಸಕ್ಕೆ.. ಶ್ರೀ ಕೃಷ್ಣನ ಸಹಾಯ ?? ನನಗೆ ಬೇಕಿಲ್ಲ!

ಬಭ್ರುವಾಹನ :  ಈ ಅಹಂಕರದಿಂದಲೇ ನೀನು ಅವನ್ನನ್ನು ಬಿಟ್ಟು ಬಂದೆಯ?? ಅವನ ಸಹಾಯ ನಿನಗೆ ಬೇಕಿಲ್ಲವೇ ?
ದೈವನನ್ನು ಮರೆತವರಿಗೆ ಮೃತ್ಯುವೇ ಸಾರಥಿ

References:

https://manigulabi.wordpress.com/2010/04/09/%E0%B2%AF%E0%B2%BE%E0%B2%B0%E0%B3%81-%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%B0%E0%B3%81-%E0%B2%A8%E0%B2%BF%E0%B2%A8%E0%B3%8D%E0%B2%A8/
https://kannadamoviesinfo.wordpress.com/2013/01/06/babruvahana-1977/
https://www.youtube.com/watch?v=DPYIgdz4n2I

%d bloggers like this: