Archive for the ‘Sandalwood’ Category

ಏನಮ್ಮಿ ಏನಮ್ಮಿ – ಅಯೋಗ್ಯ (೨೦೧೯)   Leave a comment

one of the very few good kannada movie that i watched recently, infact it was recommended by a friend particularly because of the song .

Vijay as always has done full justice, palak on the other hand is a bit tad out of sorts, nevertheless the song is very refreshing !

ಹಾಡು: ಏನಮ್ಮಿ ಏನಮ್ಮಿ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ : ಚೇತನ್ ಕುಮಾರ್ , ಗಾಯನ : ವಿಜಯ್ ಪ್ರಕಾಶ್ , ಪಲಕ್ಕ್ ಮುಚಲ್

123

ಏನಮ್ಮಿ ಏನಮ್ಮಿ
ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೂ ಕಣ್ಲ ಹೂ ಕಣ್ಲ
ನಂಗು ಹಂಗೆ ಆಯ್ತು ಕಣ್ಲ
ಪ್ರೀತಿನೇ ಹಿಂಗೆ ಕಣ್ಲ
ಸುಮ್ನೆ ಒಂದು ಮುತ್ತು ಕೊಡ್ಲ

ಬೆಳದಿಂಗ್ಳು ನೀನೆನಮ್ಮಿ
ಲಾಲಿನ ಹಾಡ್ಲೇನಮ್ಮಿ,
ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ
ದ್ರಿಷ್ಟಿನ ತೆಗಿಲೇನಮ್ಮಿ

ಚನ್ನಪಟ್ನದ್ ಗೊಂಬೆಗೆ, ಜೀವವು ಬರಲು,
ನಿನ್ನಂಗೆ ಕಾಣ್ತದೆ ನೋಡಮ್ಮಿ , ನೀ.. ಮುದ್ದು ಕಮ್ಮಿ
ಚೆಲುವಾಂತ ಚೆನ್ನಿಗ ಭೂಪತಿರಾಯ ,
ನೀನೇನೆ ಸೊಬಗು ಹೂಂ ಕಣ್ಲಾ, ನೀ ರಾಜಾ ಕಣ್ಲಾ

ನಮ್ ಪ್ರೀತಿ ಬೆಲ್ಲಕಮ್ಮಿ
ನಾವಿಬ್ರು ಯಾರಿಗ್ ಕಮ್ಮಿ

ನೀ ನಕ್ರೆ ಚಂದಾ ಕಂಡ್ಲಾ
ಈ ಜೀವ ನಿಂದೆ ಕಂಡ್ಲಾ

ಬೀರಪ್ಪನ್ ಗುಡಿ ಮುಂದೆ , ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ ,
ದಿಟ ಕಂಡ್ಲಾ , ನನ್ನಾಣೆ ಕಂಡ್ಲಾ
ಕಲ್ಲಿನ ಬಸವನು ಕಣ್ಣೊಡಿತಾನೆ
ನೀನಂದ್ರೆ ಜಾತರೆ
ಕೇಳಮ್ಮಿ, ವೈಯ್ಯಾರಮ್ಮಿ

ಕಾಲುಂಗರ ಹಾಕ್ಲೇನಮ್ಮಿ
ಹಣೆಬೊಟ್ಟು ಇಡ್ಲೇನಮ್ಮಿ
ಏನಂದ್ರು ಜಾಸ್ತಿ ಕಂಡ್ಲಾ
ನಿನ್ ಪ್ರೀತಿ ಆಸ್ತಿ ಕಂಡ್ಲಾ

Capricious Nonsense!   Leave a comment

What did I just watch, Blah! Vaastu Prakara is a total let down and it was an embarrassing experience.

 • Rakshit Shetty as Kubera – Pah! Total chutiyapa performance from him , esp when he attempts to cry with jaggesh, and his tagged m’lorean accent , he just can’t shun it!
 • Parul Yadav as Lawyer Nirmala – Amma thayi! such a torture, blaepet chickpet setu chicks can speak fluent kannada than her
 • Aishani Shetty as Ritu – Such a contrast! It’s hard to believe that Bhatt had conjured-up character like Ambika (Nidhi Subbaiah) in Pancharangi, and in VP Ritu is just another NRI-Charming-dumb-woogly-woogly-woosh-waaah-annoying girl.
 • Jaggesh and Bogse full godhi payasa antics are too much to view/listen to
 • Ananth Nag and Sudharani piece are the sanest
 • High five for Pathaje’s Cinematography

21

Just like his election song krantha, klinna, klantha, klistha, kruddha, kroora, krodha kokkre kaalu, VP is just another gig which doesn’t make sense at all!

Sakkre Pongal, Bakra Single! – Vaastu Prakara   Leave a comment

It’s the same old ingredients again = V.Harikrishna+yograj Bhatt+Jayanth Kaykini, the only difference is the wrapper. Vaastu Prakara is the new product of the above combo, starring: Rakshit Shetty, Jaggesh, Aishani Shetty, Parul Yadav, Anant Nag, Sudha Rani, T. N. Seetharam, Sudha Belawadi.

vp

 • “Vaastu Prakaara” of Yogaraj Bhat , sung by Yogaraj Bhat, V. Harikrishna – ನೀರ್ ಕೊಕ್ಕರೆ , ಹಂದಿ and elections. Just can’t connect the dots.
 • “Simply Met Her” of Yogaraj Bhat, sung by V. Harikrishna – Has good intro, but gets muddled up with gibberish stuff, sakkre pongal and bakra single!
 • “Besara Kaatara” of Yogaraj Bhat, sung by Sonu Nigam – Nigams vocals are fabulous!
 • “Biddalle Beruri” of Jayant Kaikini, sung by Vijay Prakash – Perhaps the only song which makes sense, wonderful lyrics!
 • “Kabbadi Kabbadi” of Yogaraj Bhat , Sung by Tippu, V. Harikrishna – Also known as thamate music, whaat next? – Kabbadi Kabbadi .. :D :D
 • “Manege Nalku Moole” of Yogaraj Bhat , Sung by Tippu – An intro on how Vaastu is incorporated in everyday life , very.. very mediocre!

 

My Picks:

Besara Kaatara, Simply Met Her, Biddalle Beruri

ಸಿಂಪ್ಲಿ ಮೆಟ್ ಹರ್ , ವಾಸ್ತು ಪ್ರಕಾರ (2015)   Leave a comment

ಹಾಡು : ಸಿಂಪ್ಲಿ ಮೆಟ್ ಹರ್, ಚಿತ್ರ: ವಾಸ್ತು ಪ್ರಕಾರ, ಗಾಯನ : ವಿ ಹರಿಕೃಷ್ಣ , ಸಾಹಿತ್ಯ: ಯೋಗರಾಜ್ ಭಟ್ಟ್

 

ಸಿಂಪ್ಲಿ ಮೆಟ್ ಹರ್, ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್, ಸಿಂಗಲ್ ಮೀನಿಂಗ್ ಜೋಕ್

ಸಿಂಪ್ಲಿ ಮೆಟ್ ಹರ್ ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್ ಸಿಂಗಲ್ ಮೀನಿಂಗ್ ಜೋಕ್

ಒಹ್ ಮೈ ಗಾಡ್, ವಾಟ್ ಅ ಬ್ಯೂಟಿಫುಲ್ ಮಂದಹಾಸ!

ಒಹ್ ಮೈ ಗಾಡ್, ಕೊಟ್ಟೆ ನಿ ಬೊಗಸೆ ಫುಲ್ ಗೋಧಿ ಪಾಯ್ಸ!

ಶಿ ವಾಸ್ ಲೈಕ್ ಅ ಸಕ್ಕರೆ ಪೊಂಗಲ್

ಐ ವಾಸ್ ಆಲ್ಸೋ, ಬಕ್ರ ಸಿಂಗಲ್

ಸಿಂಪ್ಲಿ ಮೆಟ್ ಹರ್, ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್, ಸಿಂಗಲ್ ಮೀನಿಂಗ್ ಜೋಕ್

ಸಿಂಪ್ಲಿ ಮೆಟ್ ಹರ್, ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್, ಸಿಂಗಲ್ ಮೀನಿಂಗ್ ಜೋಕ್

 

ಗೊತ್ತಿದ್ದರೆ ಗೊತ್ತಿದ್ದಂಗೆ, ಇರು

ಗೊತಿಲ್ದಿದ್ದ್ರೆ ಗೊತಿಲ್ದೆ, ಇರೋಹಂಗೆ ಇರು

ಗೊತ್ತಿದ್ದರು ಗೊತಿಲ್ದೆ, ಇರೋಹಂಗೆ ಇದ್ದ್ರೆ

ಗೊತಿಲ್ದೆ ಇದ್ದ್ರು, ಗೊತ್ತಿದ್ದಂಗ್ ಇದ್ದ್ರೆ

ಗೊತ್ತಿತ್ತಿದ್ದು ಗೊತ್ತಾಗಲ್ಲ, ಗೊತ್ತಯ್ಥೆನ್ರಿ

 

ಮೈ ಹಾರ್ಟ್ ಇಸ್, ಸಿಂಗಿಂಗ್ ಲೈಕ್ ಅ ಡಾಂಕಿ

ಅಲ್ಲಲಲ್ಲ, ಅಲ್ಲಲಲ್ಲ

ಅಬ್ ಕ್ಯಾ ಕರ್ನೆ, ಕಾ ಕಿ ಕ್ಯಾ ಕಿ

ಅಲ್ಲಾ.. ಲಲ್ಲಾ, ಅಲ್ಲಾ.. ಲಲ್ಲಾ

ಕಾಮನ ಬಾಣವು ನಾಟಿದರೆ , ಲ್ಯಾಂಗ್ವೇಜ್ ಎಲ್ಲ ಒಂದೇ!

ಕಾವ್ಯವು ಕಾಣದ ಪಂಚೆ ತರಹ, ಉಟ್ಟ್ರು ಬಿಟ್ಟ್ರು ಒಂದೇ!

ಇರೋದ್ ಒಂದ್ ಯವ್ವನ, ಟೋಟಲಿ ಸತ್ಯನಾಸ…

ಅಯ್ಯಯ್ಯೋ ಹೋಗ್ರಿ ರಿ , ಒನ್ ವಯ್ ಲವ್, ತುಂಬಾ ಮೋಸ..

ಅಕ್ಕಡ ಚುಸ್ತೆ, ಸಕ್ಕರೆ ಪೊಂಗಲ್

ಇಕ್ಕಡ ಸುಸ್ತೆ, ಬಕ್ರ ಸಿಂಗಲ್

ಬಿಟ್ಟಿ ಕನಸು, ನೂರ ನಲವತ್ ನಾಲ್ಕ್

ನಾ ಪ್ರಾಕ್ಟಿಕಲ್ ಆಗೋದ್ರಲ್ಲಿ , ವೀಕು

ಸಿಂಪ್ಲಿ ಮೆಟ್ ಹರ್, ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್, ಸಿಂಗಲ್ ಮೀನಿಂಗ್ ಜೋಕ್

 

ಬಿಳಬಲ್ ಹೋಂಡಾ, ತುಳಿಯವಲ್ ಕೆಂಡ

ಪ್ರೇಮದ ಪಯಣ, ಹೊರ್ರಿಬಲ್ಲು

ಕಚ್ಚಬಲ್ ಕೆನ್ನೆ, ಟಚ್ಏಬಲ್ ಮೀಸೆ

ಪಂಚವಾರ್ಷಿಕ, ಬಾರು ಬಿಲ್ಲು

ಬಾಯಿಗೆ ದೈಪೆರ್, ಹಾಕಿರುವೆ

ನಾ ಜಗದೇಕ, ಜೋಲ್ಲೆಶು !

ಕೈ ಕಟ್ ಬಾಯಿ ಮುಚ್ಚ್, ಪದ್ಯವಿದು

ಡೋಂಟ್ ಮಿಸ್ಟೇಕ್ ಮಿ, ಪಿಲ್-ಲೀಸು

ಮಿಡ್ನೈಟ್ ಡ್ರೀಮ್ಅಲ್ , ಸ ರೇ ಗ ಮ ಪ ದ ನಿ ಸ.

ಬೆಳಗಾಗ್-ಎದ್ ಕುಂತರೆ, ಮೂತಿ ಹಳೆ, ಹತ್ತು ಪಯಸ

ಒಹ್-ಥೋ ಉದರ್ , ಸಕ್ಕರೆ ಪೊಂಗಲ್

ಹಮ್ನ ಇದರ್, ಬಕ್ರ ಸಿಂಗಲ್

ಸಿಂಪ್ಲಿ ಮೆಟ್ ಹರ್, ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್, ಸಿಂಗಲ್ ಮೀನಿಂಗ್ ಜೋಕ್

ಸಿಂಪ್ಲಿ ಮೆಟ್ ಹರ್ ಸಂಟೈಮ್ಸ್ ಬಾಕ್ಕ್

ಐ ಕ್ರ್ಯಾಕ್ಡ್ ಸಿಂಗಲ್ ಮೀನಿಂಗ್ ಜೋಕ್

Posted 08/03/2015 by 6thstation in Lyrics, Sandalwood

Tagged with , ,

ಬಿದ್ದಲ್ಲೇ ಬೇರೂರಿ , ವಾಸ್ತು ಪ್ರಕಾರ (2015)   Leave a comment

ಹಾಡು : ಬಿದ್ದಲ್ಲೇ ಬೇರೂರಿ, ಚಿತ್ರ: ವಾಸ್ತು ಪ್ರಕಾರ, ಗಾಯನ : ವಿಜಯ್ ಪ್ರಕಾಶ್ , ಸಾಹಿತ್ಯ: ಜಯಂತ್ ಕಾಯ್ಕಿಣಿ.

 

ಬಿದ್ದಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ

ನಸು ನಗುವ ಮಗು ಮನಕ್ಕೆ, ವಾಸ್ತುವೆಲ್ಲಿ

 

ಮನಸೆಂಬ ಭೂಪಟದಿ, ಗಡಿ ರೇಖೆ ಇಲ್ಲ

ಮನಸೆಂಬ ಮನೆಯಲ್ಲಿ, ಗೋಡೆ ಇಲ್ಲ

ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ

ಅಣೆಕಟ್ಟೆ ಮಾತು ಆಡಬೇಕೆ

ಬೀಸೋ ಗಾಳಿಯ ಅಲೆಗೆ, ವಾಸ್ತುವೇಕೆ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

 

ಎಂತದೇ ಇರುಳನ್ನು ದಾಟಬಹುದು , ಹಚ್ಚಿಟ್ಟ ಖಂಧಿಳು ಕೈಲಿದ್ದಾರೆ

ಹಣೆಬರಹ ಕೈಯಾರೆ ಬರೆಯ ಬಹುಧು, ಎದೆಯಲ್ಲಿ ಅಕ್ಷರವ ಬಿತ್ತಿದ್ದರೆ

ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ , ಕಿಟಿಕಿ ಬಾಗಿಲುಗಳನು ಮುಚ್ಚಬೇಕೆ

ಹಕ್ಕಿ ಗೂಡಿನ ಉಳಿಗು, ವಾಸ್ತುವೇಕೆ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತು ವೆಲ್ಲಿ

 

ಆಥ್ಮಿಯವಾದನ್ಥ ಸಂಭಂಧವೇ , ನಿಜವಾಗಿ ಮನೆಗಳ ವಿನ್ಯಾಸವು

ವಸ್ತುಗಳಿಗಿಂತ ವ್ಯಕ್ತಿಗಳನು, ಹಚ್ಚಿಕೊಂಡರೆ ಮಾತ್ರ ಸಂತೋಷವೂ

ತುತ್ತು ಕಾಣದ ಬಳಗ, ಸುತ್ತ ನಿಂತಿರುವಾಗ

ಗತ್ತು ಶ್ರೀಮಂತಿಕೆಯ, ಲೋಭವೇಕೆ

ಅಮ್ಮ ಹಚ್ಚಿದ ಒಲೆಗೆ, ವಾಸ್ತು ಬೇಕೇ

 

ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ

ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ

ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ

ನಸು ನಗುವ ಮಗು ಮನಕ್ಕೆ, ವಾಸ್ತು ವೆಲ್ಲಿ

ಬೇಸರ ಕಾತರ, ವಾಸ್ತು ಪ್ರಕಾರ (2015)   Leave a comment

ಹಾಡು : ಬೇಸರ ಕಾತರ , ಚಿತ್ರ: ವಾಸ್ತು ಪ್ರಕಾರ, ಗಾಯನ : ಸೋನು ನಿಗಮ್ , ಸಾಹಿತ್ಯ: ಯೋಗರಾಜ್ ಭಟ್ಟ್

 

ಬೇಸರ , ಕಾತರ, ಗಡ್ಡ, ಹಳೇ ಹಾಡು

ಈ ಥರ ಸೋತರೆ, ಕಷ್ಟ ಉಳಿಯೋದು

ನಿಂತ ಸ್ನಾನ, ಕುಂತು ಸ್ವಪ್ನ

ತುಂಟ ಮೌನ, ಒಂಟಿ ಜೀವ್ನ

ನಿಂತ ಸ್ನಾನ, ಕುಂತು ಸ್ವಪ್ನ

ತುಂಟ ಮೌನ, ಒಂಟಿ ಜೀವ್ನ

ಇರಬಹುದೇ ಇದು ಪ್ರೇಮಾರಂಬದ

ಮೊದ ಮೊದ ತಲ್ಲಣ, ಕಿಡಿಗೇಡಿ ಲಕ್ಷಣ

ಬೇಸರ , ಕಾತರ, ಗಡ್ಡ, ಹಳೇ ಹಾಡು

 

ಪೆಂಗ ಪಾಂಡವರನ್ನು , ಒಂದೇ ಹುಡುಗನಲಿ

ಹುಡುಕುವರು ಹುಡುಗಿಯರು

ಪಕ್ಕ ನಿಂತವನನ್ನು, ಹೆಸರು ನೆನಪಿದ್ದರು

ಮರೆತಂತೆ ಕರೆಯುವರು

ವಾರೆ ನೋಟದಲಿ ಇವರ, ಫೋಕುಸ್ಸು ಜಾಸ್ತಿ

ಅದನ್ನ ನಾವ್ ಅಂದುಕೊಳ್ಳೋದು, ಶುರುವಾಯ್ತು ಪ್ರೀತಿ

ಒಂದೇ ಸಲ ಕುಡಿಯೊಡೆದ, ನೋವೆಲ್ಲಾ ನಮದು

ಸ್ಪಂಧಿಸಲು ರೆಡೀ ಇರದ , ಹೂವೆಲ್ಲ ನಿಮದು

ಬೇಸರ , ಕಾತರ, ಗಡ್ಡ, ಹಳೇ ಹಾಡು

 

ಧಸ್ವಾಳ ಲಂಗಗಳು, ಪುಟ್ ಪುಟ್ಟ ಟಾಪುಗಳು

ಇನ್ನೇನು ಬೇಕು, ನಾವ್ ಬದುಕಲು

ಬಡಪಾಯಿ ಹರೆಯದಲಿ, ಪಡಪೋಶಿ ಮಿಡಿತಗಳು

ಪ್ರೇಮಾತಿಶಯ ಸೂಸುಸವಕಲು

ತಿಳಿದು ಕೊಳ್ಳಲು ಹೋಗಿ, ಹುಡುಗಿಯರ ಮನದಾಳ

ಎಳೆದು ಕೊಂಡೆವು ಎದೆಗೆ, ಆರ್ಥಿಕ ಬರಗಾಲ

ಒಳಗ್ ಒಳಗೆ ತಿಳಿಯದಲೇ, ಒಳ ಬಂತು ನಲುಮೆ

ಒಟ್ಟಿನಲಿ ನಮದಲ್ಲ, ಇದು ನಿಮ್ಮ ಮಹಿಮೆ

ಬೇಸರ , ಕಾತರ, ಗಡ್ಡ, ಹಳೇ ಹಾಡು

ಈ ಥರ ಸೋತರೆ, ಕಷ್ಟ ಉಳಿಯೋದು

Unforgettable dialogues – Babruvahana – Battlefield Jugalbandi   Leave a comment

The dialogues from the movie ‘Babruvahana’ is delivered with such panache and style that it is simply one of the very best ever! It perfectly justifies the title that Dr Raj earned – “Nata sarvabhouma”, the dialogues are so in widely held that in popular culture it is still a benchmark for a theater audition. The richness of words and its delivery, the expressions associated, the genius of Dr.Raj makes it look so easy, asserting that he is one of the greatest artists who ever lived.

Dialogues and Song lyrics for Babruvaha were from Hunasooru Krishna Murthy and are still remembered. Also, Dr.Raj’s and PB Srinivas’s ‘Yaaru thiliyaru Ninna Bhujabalada’, is an act of battlefield jugalbandi :)

Perhaps the only negative observation is that, Dr. Raj switches the conversation to colloquial kannada after the song  ‘Yaaru ballaru ninna’.

crop_480x480_95890 (2)

ಬಭ್ರುವಾಹನ : ಏನು ಪಾರ್ಥ.?!? ಅಹ್.. ಹಹಃ … ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. .. ಈಗ ಆ ಶಕ್ತಿ ನಿನ್ನಲ್ಲಿಲ್ಲ…. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಹ್ಞೂ ,ಎತ್ತು ನಿನ್ನ ಗಾಂಢೀವ… ಹೂಡು ಪರಮೇಶ್ವರನು ಕೊಟ್ಟ…ಆ…… ನಿನ್ನ ಪಾಶುಪತಾಸ್ತ್ರ…. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ…. ಅಥವಾ, ಶಿವನನ್ನು ಗೆದ್ದೇ… ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.

ಅರ್ಜುನ : ಮದಾಂಧ!! ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ!! ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ….. ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ…

ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ

ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ…..

ಬಭ್ರುವಾಹನ : ಓಹೊಹೊಹೊ ಉಗ್ರಪ್ರತಾಪಿ ಆ! ಹಃ ಹಃ
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ…

ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ

ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ

ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ

ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ, ಪತಿವ್ರತೆಯೋ.. ಎಂದು ನಿರ್ಧರಿಸಲೇ ಈ ಯುದ್ದ.

ಅರ್ಜುನ : ಮುಗಿಯಿತು ನಿನ್ನ ಆಯಸ್ಸು

ಬಭ್ರುವಾಹನ : ಅದನ್ನ ಮುಗ್ಸೋದಕ್ಕೆ ಯಾರ್ ಇದಾರೆ ನಿನ್ ಸಹಾಯಕ್ಕೆ
ಶಿಖಂಡಿ ನಾ ಮುಂದೆ ನಿಲ್ಸಿ ಭಿಶ್ಮನ್ನ ಕೊಂದ-ಹಾಗೆ, ನನ್ನನ್ನ ಕೊಲ್ಲೊದಕ್ಕೆ ಇಲ್ಲಿ ಯಾವ್ ಶಿಖಂಡಿನು ಇಲ್ಲ!
ಧರ್ಮರಾಯರ ಬಾಯಲ್ಲಿ ಅಬಧ್ಹ ನುಡ್ಸಿ, ದ್ರೋಣಾಚಾರ್ಯರ ಕೊಂದಹಾಗೆ, ನನ್ನನ ಕೊಲ್ಲಲು, ಸುಳ್ಳು ಹೇಳೋಕೆ ಧರ್ಮರಾಯ ಇಲ್ಲಿಲ್ಲ …
ರಥದ ಚಕ್ರ ಮುರ್ದಿದ್ದಾಗ, ಕವಚ ಕುಂಡಲಗಳ ದಾನ ಪಡೆದು, ಕರ್ಣನ ಕೊಲ್ಲ್ಸಿದ್ಧಾಗೆ, ನನ್ನನ ಕೊಲ್ಲ್ಸೋದಕ್ಕೆ ನಿನ್ನ ಶ್ರೀ ಕೃಷ್ಣ ಪರಮಾತ್ಮ ಇಲ್ಲಿಲ್ಲ,

ಇರೋದು ಪತಿವ್ರತೆಯ ಮಗನಾದ ನಾನು.. ಮಿತ್ರ ಧ್ರೋಹಿಯದ ನೀನು ..
ನಿಶ್ಕ್ಥವದ ಅಸ್ತ್ರಗಳ ಪ್ರಯೋಗದಿಂದ, ವೃಥಾ ಕಾಲಹರಣ ಮಾಡಬೇಡ ವೀರ …
ಕರೆ ನಿನ್ನ ಕೃಷ್ಣನನ್ನ , ಅವನು ಬಂದು ಸಾರಥ್ಯವಹಿಸಲಿ, ಅವನ ಮುಂದೆ, ನಿನ್ನ ಪ್ರಾಣವನ್ನು ಅವನ ಪದಾರವಿಂದಗಳಲ್ಲಿ ಅರ್ಪಿಸುತ್ತೇನೆ.. ಹನ್ ಛೇಡಿಸು… ಕೂಗು ಯದುನಂದನ ಎಂದು …

ಅರ್ಜುನ : ಅಹ್! ನಿಂನಥಹ ತುಚ್ಚ ಮಾನವನ ಧ್ವಂಸಕ್ಕೆ.. ಶ್ರೀ ಕೃಷ್ಣನ ಸಹಾಯ ?? ನನಗೆ ಬೇಕಿಲ್ಲ!

ಬಭ್ರುವಾಹನ :  ಈ ಅಹಂಕರದಿಂದಲೇ ನೀನು ಅವನ್ನನ್ನು ಬಿಟ್ಟು ಬಂದೆಯ?? ಅವನ ಸಹಾಯ ನಿನಗೆ ಬೇಕಿಲ್ಲವೇ ?
ದೈವನನ್ನು ಮರೆತವರಿಗೆ ಮೃತ್ಯುವೇ ಸಾರಥಿ

References:

https://manigulabi.wordpress.com/2010/04/09/%E0%B2%AF%E0%B2%BE%E0%B2%B0%E0%B3%81-%E0%B2%A4%E0%B2%BF%E0%B2%B3%E0%B2%BF%E0%B2%AF%E0%B2%B0%E0%B3%81-%E0%B2%A8%E0%B2%BF%E0%B2%A8%E0%B3%8D%E0%B2%A8/
https://kannadamoviesinfo.wordpress.com/2013/01/06/babruvahana-1977/
https://www.youtube.com/watch?v=DPYIgdz4n2I

%d bloggers like this: