Archive for the ‘Lyrics’ Category

ಮಳೆ ಮರೆತು , ಉಳಿದವರು ಕಂಡಂತೆ (2014)   Leave a comment

A gem of a song from the movie ಉಳಿದವರು ಕಂಡಂತೆ which exemplifies contemporary suffering, has terrific lyrics accompanied by patho-harmonium-tune.

ಹಾಡು : ಮಳೆ ಮರೆತು , ಚಿತ್ರ: ಉಳಿದವರು ಕಂಡಂತೆ (೨೦೧೪), ಗಾಯನ: ವಿಜಯ್ ಪ್ರಕಾಶ್ , ಸಾಹಿತ್ಯ:ವಿಗ್ನೆಶ್ವರ್ ವಿಶ್ವ , ಸಂಗೀತ :ಬಿ. ಅಜನೀಶ್ ಲೋಕನಾಥ್

ಮಳೆ ಮರೆತು, ತಾನಾಗೆ ಹಸಿರಾಗಿ, ನಿ೦ತಾಗ….  ಈ ಭೂಮಿ,
ಸಲಹೇನೇ ಕೊಡಬೇಡ, ದೇವರೇ….  ನೀನಿಲ್ಲಿ ಹ೦ಗಾಮಿ,
ಕಣ್ಣೀರೆ ನಿನ್ನ, ಸ೦ತೆಗೆ ಕರೆದಾಗ… ಬೇಜಾರಿನಲ್ಲೆ ಸಜ್ಜಾದೆಯ….
ನೋವಿರುವ ಗಾಯ, ಬೆರಳಲ್ಲೆ ಇರುವಾಗ…  ಬಿಡಿಸೋದು ಕಲಿತೆ, ರ೦ಗೋಲಿಯ….
ಮಿ೦ಚೊ೦ದು ಕಿಡಿಕಾರಿ, ಆಕಾಶ ಚೆಲುವಾಯ್ತು….  ಹೇಗೆ?
ಬೆ೦ಕಿಯ ಕಡಿಗೀರಿ, ಮನೆತು೦ಬ ಬೆಳಕಾದ….  ಹಾಗೆ…

ಆ ಚ೦ದ್ರನಿ೦ದು, ನಿದ್ದೇಲೆ ಎದ್ದು, ಕಣ್ಣುಜ್ಜಿಕೊ೦ಡು ತೇಲಿ…  ಬ೦ದ….
ತೆ೦ಗಿನಗರಿಗೆ, ತಾಗುತ್ತಾ ಹೋದ… ಊರೂರಿಗೆಲ್ಲ ಚ೦ದ.. ತ೦ದ….
ದೋಣಿಲಿ ಹುಟ್ಟಿ೦ದು ಕೈ ತಪ್ಪಲು…. ತಕ್ಷಣವೇ ನೆರವಾಯ್ತು ನಡುನೀರೇ ದಡ ನೀಡಿ
ಹಾಡೊ೦ದು ಹೊರಟಾಗ ಕಡುಗಪ್ಪಲಿ…  ರಕ್ಷಣೆಗೆ ಬ೦ದ೦ತೆ ಬೆಳಕೊ೦ದು ದನಿಗೂಡಿ…
ಎಲೆ ಮೇಲೆ ಕಾಲೂರಿ… ಹನಿಯೊ೦ದು ಹೊಳಪಾಯ್ತು…  ಇನ್ನು….
ಎ೦ದೆ೦ದೂ ಇರುವ೦ತ…  ಮಳೆಬಿಲ್ಲ ಮುಡಿದಾಯ್ತು….  ಬಾನು…

ಎಳೆಬಿಸಿಲ ನೆನಪಾಗಿ, ಅತ್ತ೦ತೆ ಇಳಿಸ೦ಜೆಯಾ..  ಹೂವು….
ನುಣುಪಾದ ಈಟೀಲಿ, ಎದೆಗೇನೆ ಇರಿದ೦ತೆ..  ಆ ಸಾವು….
ಬೇರಿರದ ಮರಕೆ, ಬಿರುಗಾಳಿ ಬಡಿದಾಗ, ಉರುಳುವ ಜಾಗ ಇರದಾಗಿದೆ…
ಬಾಯಾರಿ ಸೂರ್ಯ, ಬಿಸಿಲಾಗಿ ನಿ೦ತಾಗ, ಸಾಗರವೂ ಕೂಡ ಬರಿದಾಗಿದೆ….
ಆಳಿರದೆ ಹಾಳ್ಹಿಡಿದು, ಹೋದ೦ತೆ ಈ ಊರ.. ಕೇರಿ…
ಸುಳಿವೊ೦ದು ನೀರಿಳಿದು, ತಡೆದ೦ತೆ ನದಿ ನೀರ.. ದಾರಿ….

ಕಾಕಿಗ್ ಬಣ್ಣ, ಉಳಿದವರು ಕಂಡಂತೆ (2014)   Leave a comment

How will a Crow view through the paint? An introspective study… Jeeezzz! Shreya does a marvelous job in expressing the same.

ಹಾಡು : ಕಾಕಿಗ್ ಬಣ್ಣ , ಚಿತ್ರ: ಉಳಿದವರು ಕಂಡಂತೆ (೨೦೧೪), ಗಾಯನ: ಶ್ರೇಯಾ ಘೋಶಾಲ್ , ಸಾಹಿತ್ಯ: ರಕ್ಷಿತ್ ಶೆಟ್ಟಿ  , ಸಂಗೀತ :ಬಿ. ಅಜನೀಶ್ ಲೋಕನಾಥ್

ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ…  ಕಾಂತ?
ಭಂಗಿ ಸೇದಿದ್ ತಲಿ, ಸತ್ಯ ಕಾಂತ..  ಸುಳ್ಳು ಕಾಂತ?

ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ…  ಕಾಂತ?
ಭಂಗಿ ಸೇದಿದ್ ತಲಿ, ಸತ್ಯ ಕಾಂತ..  ಸುಳ್ಳು ಕಾಂತ?

ಜ್ಯೈದ್ ಎಲಿ, ಬಿಳಿ ಸುಣ್ಣ.. ಕಾಂತ?
ಸತ್ ಜೀವ, ಗಂಜಿ ತಿಳಿ..  ಕಾಂತ?
ಜ್ಯೈದ್ ಎಲಿ… ಗಂಜಿ ತಿಳಿ..
ಭಾಷಿ ಬರದ್ ನ್ಯಾಲ್ಗಿ, ಕೀರ್ತಿ ಕಾಂತ…  ಕ್ರಾಂತಿ ಕಾಂತ?

ತಾಳಿ ಗರಿ,  ಲಿಪಿ..  ಕಾಂತ?
ಕನಕನ್ ಕಿಂಡಿ, ಮೈ ಬಣ್ಣ…  ಕಾಂತ?
ದಾಸರ್ ಪದ, ಹಬ್ಬ ಕಾಂತ….  ಜಾತ್ರಿ ಕಾಂತ?

ಕಾಕಿಗ್ ಬಣ್ಣ… ಕಾಂತ?
ಬಣ್ಣ ಹಾಕ್’ದ್ ಚರ್ಮ…  ಕಾಂತ?
ಭಂಗಿ ಸೇದಿದ್ ತಲಿ, ಸತ್ಯ ಕಾಂತ..  ಸುಳ್ಳು ಕಾಂತ?

ಸದಾ ನಿನ್ನ ಕಣ್ಣಲಿ, ಬಚ್ಚನ್ (2013)   Leave a comment

I am really in awe of Jayanth Kaykini’s writing ability , and his fervent penchant for romantic magnificence and this song illustrates the same, forget my heart goes dhim tana na, forget bare bare, forget mein mar java, mein mit java and lastly forget the queer post-smitten-air-grabbing-body-stretching movements of sudeep, instead delve into the luxurious side of words, words that degenerates sulking, that which disseminates its bimba on to you,  in addition, Shreya and Nigam have beautifully rendered their voices and this number makes one of the greatest post modern duets (kannada) of all time.

sadaninnakannali

ಹಾಡು: ಸದಾ ನಿನ್ನ , ಚಿತ್ರ: ಬಚ್ಚನ್ (2013) , ಗಾಯನ : ಶ್ರೇಯಾ ಘೋಷಲ್ , ಸಾಹಿತ್ಯ : ಜಯಂತ್ ಕಾಯ್ಕಿಣಿ, ಸಂಗೀತ : ವಿ. ಹರಿಕೃಷ್ಣ

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ , ತಯಾರಾದೆ ನಾನು..
ನಿನ್ನದೇ ಗುರುತು.. ಕಣ್ಣಲ್ಲೇ ಕುಳಿತು..
ನನ್ನೆದೆಯ ಸ್ಥಿತಿಯೇ ನಾಜೂಕು..
ನಿನಗೆಂದೇ ಬಾಳುವೆ, ಹಟ ಮಾಡಿ ನಾನು..
ಓಹ್, ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

ಬಲು ಭಾವುಕ ಬದಲಾವಣೆ, ನನ್ನಲ್ಲಿ ನೀ ತಂದೆ.. ಈಗ
ಅಲೆದಾಡುವ ಅಪರೂಪವ, ನಿನ್ನಲ್ಲಿ ನಾ ಕಂಡೆ.. ಓಹ್ ಓ..
ನೀನೇ ಬಣ್ಣ ನೀನೇ ನಕಾಶೆ..
ನೀನೇ ನನ್ನ ದಿವ್ಯ ದುರಾಸೆ..
ನೀನೇ ವಾರ್ತೆ ನೀನೇ ವಿಹಾರ..
ನೀನೇ ದಾರಿ ನನ್ನ ಬಿಡಾರ..
ನೆನಪಾದರೆ ಸಾಕು, ಎದುರು ನೀನೇ ಬೇಕು..
ಬಿಡಲಾರೆ ನಿನ್ನನು, ಸಲೀಸಾಗಿ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ಮರುಳಾಗಿ ಹೋದೆನು ಸುಮಾರಾಗಿ ನಾನು..

ಕನಸನು ಗುಣಿಸುವಂತ , ನೆನಪನು ಎಣಿಸುವಂಥ… ಹೃದಯದ ಗಣಿತ ನೀನು..
ನನ್ನ ಜೀವ ನಿನ್ನ ಸಮೀಪ..
ಬೇರೆ ಏನು ಇಲ್ಲ ಕಲಾಪ..
ನೀನೇ ಮೌನ ನೀನೇ ವಿಲಾಸ…
ನೀನೇ ನನ್ನ ಖಾಯಂ ವಿಳಾಸ..
ಬಳಿ ಇದ್ದರೆ ನೀನು, ಮರಳಬಾರದಿನ್ನು..
ನಿನ್ನನ್ನೇ ನಂಬುತ, ಬಚಾವಾದೆ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

ನಿ ತೊರೆದ , ಲೂಸಿಯ (2013)   1 comment

The intro is inspired by kirtanas, philosophical verses of Saint Kanakadasa which is in itself nihilistic, then comes a sense of desolation which naturally is a necessary stage in a broken love affair.

Lucia2

ಹಾಡು: ನಿ ತೊರೆದ , ಚಿತ್ರ: ಲೂಸಿಯ (2013) , ಗಾಯನ : ಅನನ್ಯ ಭಟ್ಟ್, ಉದಿತ್ ಹರಿದಾಸ್ , ಸಾಹಿತ್ಯ : ರಘು ಶಾಸ್ತ್ರಿ, ಸಂಗೀತ : ಪೂರ್ಣಚಂದ್ರ ತೇಜಸ್ವಿ

ನಿ ಮಾಯೆಯೊಳಗೋ, ಮಾಯೆ ನಿನ್ನೋಳಗೋ… ? ನಿ ದೇಹದೊಳಗೋ, ದೇಹ ನಿನ್ನೋಳಗೋ…   ?
ನಿ ಕನಸಿನೋಳಗೋ, ಕನಸು ನಿನ್ನೋಳಗೋ… ? ನಿ ಅಮಲಿನೋಳಗೋ, ಅಮಲು ನಿನ್ನೋಳಗೋ…  ?
ಮನಸು, ದೇಹಗಳೆರದು ಸೆಳೆಯುವ.. ಸುಳಿಯಂಥಿರುವ ಪ್ರೇಮದೊಳಗೋ.. ?

ನಿ ತೊರೆದ ಘಳಿಗೆಯಲಿ,
ನನ್ನದೆಯ ತುಂಬಾ ನಿನ್ನಾ ಗುರುತು..
ನೆನಪುಗಳ ಮಳಿಗೆಯಲಿ,
ಇನ್ನಾರು ಇಲ್ಲಾ ನಿನ್ನಾ ಹೊರತು…
ಒಂಟಿ ಮೋಡದ ಕಣ್ಣ-ಹನಿಯ,
ದೂರದಿಂದಲೇ ನೋಡು ಇನಿಯ..
ಕಾಣದಿದ್ದರೂ , ಕಾಡುತಿರುವ,
ಹೇಳದಿದ್ದರೂ, ಹೇಳುತಿರುವ…
ಹೃದಯದಾ ತಾಳಕೆ… ಹಾಡುತಿರುವ… ಹಾಡುತಿರುವ..
ನಿ ಯಾರೋ ಯಾರೋ ಯಾರೋ ?

ಇ ಪ್ರೀತಿಯೇ ಮಾಯೇ, ನಗುವಾಗಲಿ ನೋವೇ, ಹೇ
ಏಕಾಂತದ ಛಾಯೆ, ಹಗಲಿರುಳು ಕಾಡಿದೆ…
ಮೊದಲೇ ರಗಳೇ, ಪ್ರೀತಿ ಪದವೇ,
ಎಂದಿಗೆ ಬರುವೆಯೋ….
ತಿಳಿಯದೆ ನನ್ನೆದೆ…
ಹೃದಯದ… ಬಡಿತವೆ ನಿಂತಂತಾಗಿದೆ …

ನೀನು ಮರೆಯದ ಮರುಘಳಿಗೆ,
ಮನಸು ಬಯಸಿದೇ ಸಾನಿಧ್ಯ…
ಮತ್ತೆ ಸೇರಲು ನಿನ್ನೊಳಗೆ,
ರಾಜಿಯಗುತಿದೆ ಆಂತರ್ಯ..
ನಾವಿಕನಿಲ್ಲದ ದೋಣಿ ಇದು,
ಒಂಟಿ ಸಾಗುವ ಯಾತನೆಯು…
ನೆರಳನು ಹಿಡಿಯುವ ಆಟವಿದು,
ಇನ್ನು ಸಾಕೆನುವ ಪ್ರಾಥನೆಯು…

ನಿ ಮಾಯೆಯೊಳಗೋ, ಮಾಯೆ ನಿನ್ನೋಳಗೋ… ? ನಿ ದೇಹದೊಳಗೋ, ದೇಹ ನಿನ್ನೋಳಗೋ…   ?
ಮನಸು, ದೇಹಗಳೆರದು ಸೆಳೆಯುವ..   ಸುಳಿಯಂಥಿರುವ ಪ್ರೇಮದೊಳಗೋ.. ?
ನಿ ಕನಸಿನೋಳಗೋ, ಕನಸು ನಿನ್ನೋಳಗೋ… ? ನಿ ಅಮಲಿನೋಳಗೋ, ಅಮಲು ನಿನ್ನೋಳಗೋ…  ?
ಅಮಲಿನಲ್ಲಿ, ಕಂಡ ಕನಸಿನಲ್ಲೂ ಸಿಗುವ…  ಪ್ರೀತಿ ಸೂಲಿನೋಳಗೋ  ?

ನಿ ತೊರೆದ ಘಳಿಗೆಯಲಿ,
ನನ್ನದೆಯ ತುಂಬಾ ನಿನ್ನಾ ಗುರುತು..
ನೆನಪುಗಳ ಮಳಿಗೆಯಲಿ,
ಇನ್ನಾರು ಇಲ್ಲಾ ನಿನ್ನಾ ಹೊರತು…
ಒಂಟಿ ಮೋಡದ ಕಣ್ಣ-ಹನಿಯ,
ದೂರದಿಂದಲೇ ನೋಡು ಇನಿಯ..
ಕಾಣದಿದ್ದರೂ, ಕಾಡುತಿರುವ,
ಹೇಳದಿದ್ದರೂ, ಹೇಳುತಿರುವ…
ಹೃದಯದಾ ತಾಳಕೆ… ಹಾಡುತಿರುವ… ಹಾಡುತಿರುವ..
ನಿ ಯಾರೋ ಯಾರೋ ಯಾರೋ ?

%d bloggers like this: