ಹಾಡು : ಬಿದ್ದಲ್ಲೇ ಬೇರೂರಿ, ಚಿತ್ರ: ವಾಸ್ತು ಪ್ರಕಾರ, ಗಾಯನ : ವಿಜಯ್ ಪ್ರಕಾಶ್ , ಸಾಹಿತ್ಯ: ಜಯಂತ್ ಕಾಯ್ಕಿಣಿ.
ಬಿದ್ದಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ, ವಾಸ್ತುವೆಲ್ಲಿ
ಮನಸೆಂಬ ಭೂಪಟದಿ, ಗಡಿ ರೇಖೆ ಇಲ್ಲ
ಮನಸೆಂಬ ಮನೆಯಲ್ಲಿ, ಗೋಡೆ ಇಲ್ಲ
ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ
ಅಣೆಕಟ್ಟೆ ಮಾತು ಆಡಬೇಕೆ
ಬೀಸೋ ಗಾಳಿಯ ಅಲೆಗೆ, ವಾಸ್ತುವೇಕೆ
ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ
ಎಂತದೇ ಇರುಳನ್ನು ದಾಟಬಹುದು , ಹಚ್ಚಿಟ್ಟ ಖಂಧಿಳು ಕೈಲಿದ್ದಾರೆ
ಹಣೆಬರಹ ಕೈಯಾರೆ ಬರೆಯ ಬಹುಧು, ಎದೆಯಲ್ಲಿ ಅಕ್ಷರವ ಬಿತ್ತಿದ್ದರೆ
ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ , ಕಿಟಿಕಿ ಬಾಗಿಲುಗಳನು ಮುಚ್ಚಬೇಕೆ
ಹಕ್ಕಿ ಗೂಡಿನ ಉಳಿಗು, ವಾಸ್ತುವೇಕೆ
ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ, ವಾಸ್ತು ವೆಲ್ಲಿ
ಆಥ್ಮಿಯವಾದನ್ಥ ಸಂಭಂಧವೇ , ನಿಜವಾಗಿ ಮನೆಗಳ ವಿನ್ಯಾಸವು
ವಸ್ತುಗಳಿಗಿಂತ ವ್ಯಕ್ತಿಗಳನು, ಹಚ್ಚಿಕೊಂಡರೆ ಮಾತ್ರ ಸಂತೋಷವೂ
ತುತ್ತು ಕಾಣದ ಬಳಗ, ಸುತ್ತ ನಿಂತಿರುವಾಗ
ಗತ್ತು ಶ್ರೀಮಂತಿಕೆಯ, ಲೋಭವೇಕೆ
ಅಮ್ಮ ಹಚ್ಚಿದ ಒಲೆಗೆ, ವಾಸ್ತು ಬೇಕೇ
ಬಿದ್ಧಲ್ಲೇ ಬೇರೂರಿ, ಗಗನಕ್ಕೆ ಕೈ ಎತ್ತಿ
ಹೂವಿಡುವ ಗಿಡ ಮರಕೆ, ವಾಸ್ತುವೆಲ್ಲಿ
ಗುಡಿಸಲಿನ ಹೊಸಿಲಲ್ಲಿ, ಬಡ ತಾಯ ಮಡಿಲಲ್ಲಿ
ನಸು ನಗುವ ಮಗು ಮನಕ್ಕೆ, ವಾಸ್ತು ವೆಲ್ಲಿ
Leave a Reply