ಮಳೆ ಮರೆತು , ಉಳಿದವರು ಕಂಡಂತೆ (2014)   Leave a comment

A gem of a song from the movie ಉಳಿದವರು ಕಂಡಂತೆ which exemplifies contemporary suffering, has terrific lyrics accompanied by patho-harmonium-tune.

ಹಾಡು : ಮಳೆ ಮರೆತು , ಚಿತ್ರ: ಉಳಿದವರು ಕಂಡಂತೆ (೨೦೧೪), ಗಾಯನ: ವಿಜಯ್ ಪ್ರಕಾಶ್ , ಸಾಹಿತ್ಯ:ವಿಗ್ನೆಶ್ವರ್ ವಿಶ್ವ , ಸಂಗೀತ :ಬಿ. ಅಜನೀಶ್ ಲೋಕನಾಥ್

ಮಳೆ ಮರೆತು, ತಾನಾಗೆ ಹಸಿರಾಗಿ, ನಿ೦ತಾಗ….  ಈ ಭೂಮಿ,
ಸಲಹೇನೇ ಕೊಡಬೇಡ, ದೇವರೇ….  ನೀನಿಲ್ಲಿ ಹ೦ಗಾಮಿ,
ಕಣ್ಣೀರೆ ನಿನ್ನ, ಸ೦ತೆಗೆ ಕರೆದಾಗ… ಬೇಜಾರಿನಲ್ಲೆ ಸಜ್ಜಾದೆಯ….
ನೋವಿರುವ ಗಾಯ, ಬೆರಳಲ್ಲೆ ಇರುವಾಗ…  ಬಿಡಿಸೋದು ಕಲಿತೆ, ರ೦ಗೋಲಿಯ….
ಮಿ೦ಚೊ೦ದು ಕಿಡಿಕಾರಿ, ಆಕಾಶ ಚೆಲುವಾಯ್ತು….  ಹೇಗೆ?
ಬೆ೦ಕಿಯ ಕಡಿಗೀರಿ, ಮನೆತು೦ಬ ಬೆಳಕಾದ….  ಹಾಗೆ…

ಆ ಚ೦ದ್ರನಿ೦ದು, ನಿದ್ದೇಲೆ ಎದ್ದು, ಕಣ್ಣುಜ್ಜಿಕೊ೦ಡು ತೇಲಿ…  ಬ೦ದ….
ತೆ೦ಗಿನಗರಿಗೆ, ತಾಗುತ್ತಾ ಹೋದ… ಊರೂರಿಗೆಲ್ಲ ಚ೦ದ.. ತ೦ದ….
ದೋಣಿಲಿ ಹುಟ್ಟಿ೦ದು ಕೈ ತಪ್ಪಲು…. ತಕ್ಷಣವೇ ನೆರವಾಯ್ತು ನಡುನೀರೇ ದಡ ನೀಡಿ
ಹಾಡೊ೦ದು ಹೊರಟಾಗ ಕಡುಗಪ್ಪಲಿ…  ರಕ್ಷಣೆಗೆ ಬ೦ದ೦ತೆ ಬೆಳಕೊ೦ದು ದನಿಗೂಡಿ…
ಎಲೆ ಮೇಲೆ ಕಾಲೂರಿ… ಹನಿಯೊ೦ದು ಹೊಳಪಾಯ್ತು…  ಇನ್ನು….
ಎ೦ದೆ೦ದೂ ಇರುವ೦ತ…  ಮಳೆಬಿಲ್ಲ ಮುಡಿದಾಯ್ತು….  ಬಾನು…

ಎಳೆಬಿಸಿಲ ನೆನಪಾಗಿ, ಅತ್ತ೦ತೆ ಇಳಿಸ೦ಜೆಯಾ..  ಹೂವು….
ನುಣುಪಾದ ಈಟೀಲಿ, ಎದೆಗೇನೆ ಇರಿದ೦ತೆ..  ಆ ಸಾವು….
ಬೇರಿರದ ಮರಕೆ, ಬಿರುಗಾಳಿ ಬಡಿದಾಗ, ಉರುಳುವ ಜಾಗ ಇರದಾಗಿದೆ…
ಬಾಯಾರಿ ಸೂರ್ಯ, ಬಿಸಿಲಾಗಿ ನಿ೦ತಾಗ, ಸಾಗರವೂ ಕೂಡ ಬರಿದಾಗಿದೆ….
ಆಳಿರದೆ ಹಾಳ್ಹಿಡಿದು, ಹೋದ೦ತೆ ಈ ಊರ.. ಕೇರಿ…
ಸುಳಿವೊ೦ದು ನೀರಿಳಿದು, ತಡೆದ೦ತೆ ನದಿ ನೀರ.. ದಾರಿ….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: