ಸದಾ ನಿನ್ನ ಕಣ್ಣಲಿ, ಬಚ್ಚನ್ (2013)   Leave a comment

I am really in awe of Jayanth Kaykini’s writing ability , and his fervent penchant for romantic magnificence and this song illustrates the same, forget my heart goes dhim tana na, forget bare bare, forget mein mar java, mein mit java and lastly forget the queer post-smitten-air-grabbing-body-stretching movements of sudeep, instead delve into the luxurious side of words, words that degenerates sulking, that which disseminates its bimba on to you,  in addition, Shreya and Nigam have beautifully rendered their voices and this number makes one of the greatest post modern duets (kannada) of all time.

sadaninnakannali

ಹಾಡು: ಸದಾ ನಿನ್ನ , ಚಿತ್ರ: ಬಚ್ಚನ್ (2013) , ಗಾಯನ : ಶ್ರೇಯಾ ಘೋಷಲ್ , ಸಾಹಿತ್ಯ : ಜಯಂತ್ ಕಾಯ್ಕಿಣಿ, ಸಂಗೀತ : ವಿ. ಹರಿಕೃಷ್ಣ

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ , ತಯಾರಾದೆ ನಾನು..
ನಿನ್ನದೇ ಗುರುತು.. ಕಣ್ಣಲ್ಲೇ ಕುಳಿತು..
ನನ್ನೆದೆಯ ಸ್ಥಿತಿಯೇ ನಾಜೂಕು..
ನಿನಗೆಂದೇ ಬಾಳುವೆ, ಹಟ ಮಾಡಿ ನಾನು..
ಓಹ್, ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

ಬಲು ಭಾವುಕ ಬದಲಾವಣೆ, ನನ್ನಲ್ಲಿ ನೀ ತಂದೆ.. ಈಗ
ಅಲೆದಾಡುವ ಅಪರೂಪವ, ನಿನ್ನಲ್ಲಿ ನಾ ಕಂಡೆ.. ಓಹ್ ಓ..
ನೀನೇ ಬಣ್ಣ ನೀನೇ ನಕಾಶೆ..
ನೀನೇ ನನ್ನ ದಿವ್ಯ ದುರಾಸೆ..
ನೀನೇ ವಾರ್ತೆ ನೀನೇ ವಿಹಾರ..
ನೀನೇ ದಾರಿ ನನ್ನ ಬಿಡಾರ..
ನೆನಪಾದರೆ ಸಾಕು, ಎದುರು ನೀನೇ ಬೇಕು..
ಬಿಡಲಾರೆ ನಿನ್ನನು, ಸಲೀಸಾಗಿ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ಮರುಳಾಗಿ ಹೋದೆನು ಸುಮಾರಾಗಿ ನಾನು..

ಕನಸನು ಗುಣಿಸುವಂತ , ನೆನಪನು ಎಣಿಸುವಂಥ… ಹೃದಯದ ಗಣಿತ ನೀನು..
ನನ್ನ ಜೀವ ನಿನ್ನ ಸಮೀಪ..
ಬೇರೆ ಏನು ಇಲ್ಲ ಕಲಾಪ..
ನೀನೇ ಮೌನ ನೀನೇ ವಿಲಾಸ…
ನೀನೇ ನನ್ನ ಖಾಯಂ ವಿಳಾಸ..
ಬಳಿ ಇದ್ದರೆ ನೀನು, ಮರಳಬಾರದಿನ್ನು..
ನಿನ್ನನ್ನೇ ನಂಬುತ, ಬಚಾವಾದೆ ನಾನು..

ಸದಾ ನಿನ್ನ ಕಣ್ಣಲಿ.. ನನ್ನ ಬಿಂಬ ಕಾಣಲು..
ತುದಿಗಾಲಿನಲ್ಲಿ ತಯಾರಾದೆ ನಾನು..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: