ಹೇಳು ಶಿವ, ಲೂಸಿಯ (2013)   1 comment

ಹಾಡು: ಹೇಳು ಶಿವ, ಚಿತ್ರ: ಲೂಸಿಯ (2013) , ಗಾಯನ : ನವೀನ ಸಜ್ಜು , ರಕ್ಷಿತ್ ನಾಗರಾಲೇ , ಯೋಗರಾಜ್ ಭಟ್ಟ್ , ಸಾಹಿತ್ಯ : ಯೋಗರಾಜ್ ಭಟ್ಟ್, ಸಂಗೀತ : ಪೂರ್ಣಚಂದ್ರ ತೇಜಸ್ವಿ

ಹೇಳು ಶಿವ!
ಹೇಳು ಶಿವ!
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!

ಹೈಸ್ಕೂಲು ಪಾಸಾದೆ, ಪ್ರೇಮದಲಿ ಫೇಲಾದೆ !!
ಹೈಸ್ಕೂಲು ಪಾಸಾದೆ, ಪ್ರೇಮದಲಿ ಫೇಲಾದೆ !!
ಆ ನಿಮ್ಮ ಕಥೆ, ಈ ನನ್ನ ಕಥೆ…
ಎರಡರಲು ಒಂದೇ ವ್ಯಥೆ !
ಎಲ್ಲಿಂದ ಹೇಳುವುದೋ, ಶುರುವಿನಲೇ ಮುಗಿಯುವುದೋ ?
ಮುಗಿತಪ್ಪ ಅಂದುಕೊಂಡ್ರೆ , ಮತ್ತೆ ಶುರುವಗುವುದೋ ?
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!

ಎದೆ ಬಾಗಿಲು ಬೆಲ್ಲು ಒತ್ತಿ, ನಸುನಕ್ಕಿತು ಹೂವೊಂದು…
ಒಳ ಬಾರದೆ ಹೊರಟೇ ಹೋಯಿತು, ಹಳೆ ವ್ಯಾನಿಟಿ ಬ್ಯಾಗೊಂದು..
ಅವಳ ಕಣ್ಣ  ನಗುವಿನಲ್ಲೂ ಮಿನುಗುತಿತ್ತು, ಹನಿಯೊಂದು…
ಬೆಳದಿಂಗಳ ಹೀಟಿಗೆ ಎದ್ದು ಓ.. ಹೆಟ್ಟಿತು ನಾಯೊಂದು…
ಸತ್ತ ಚಂದಮನಿಗೊಂದು , ಶವಪೆಟ್ಟಿಗೆ ಸಿಗಬಹುದೇ ?
ಆಟೋರಿಕ್ಷಾ ಹಿಂದೆ ಹೀಗೆ, ಸಾಲೊಂದ ನಾ ಬರೆದೆ..
ಏನಿದೆ ಹಳೇ ಹುಡುಗಿ ಕನಸಲಿ, ಏಳಲೇ ಶಿವ ಬೆಳಕಾಯ್ತು..
ಬ್ರಷಿಗೆ ಒಸಿ ಪೇಷ್ಟು ಹಾಕಲೇ, ಎಣ್ಣೆಗೆ ಬಾಯ್ ಕೊಳಕಾಯ್ತು…
ಹೇಳು ಶಿವ!
ಹೇಳು ಶಿವ!
ಹೇಳು ಶಿವ ಯಾಕಿಂಗಾದೆ, ಯಾಕಿಷ್ಟು ವೀಕಾದೆ ?
ಹೇಳು ಶಿವ ಯಾಕಿಂಗಾದೆ, ಏನಯ್ಯ ನಿನ ಭಾದೆ !!

ನೆನ್ನೆಗಳ ಊರಿನಲ್ಲಿ, ಹುಡುಗಿಯರ ಸಂತೆ ಇದೆ..
ಹುಡುಗಿಯರ ಸಂತೆಯಲಿ, ನಾಳೆಗಳ ಚಿಂತೆ ಇದೆ..
ನೋಟುಬುಕ್ಕು ಕೊನೇಯ ಪೇಜು ಗೀಚಿಕೊಂಡ, ಹೆಸರುಗಳು..
ಸೆಲ್ಫೋನು ಗ್ಯಾಲೆರಿಯಲ್ಲಿ ಕೆನ್ನೆ ತೂರಿಸೋ, ಫೋಟೋಗಳು..
ಸತ್ತ ಕನಸಿಗೇಲ್ಲೂ ನೀನು, ನನ ಹುಡುಗಿ ಬಿಡಬಹುದು..
ತೂತು ಮಡಿಕೆಯಂಥ ಹೃದಯ, ಏಷ್ಟು ಬೀರು ಕುಡಿಬಹುದು ?
ಹೃದಯಕೆ ಇಚ್ಚುಗಾರ್ಡು ಹಚ್ಚಲೇ ನೆನಪು ತುಂಬಾ ಕೆರೆದಾಗ ?
ಮುಗಿವೆವು ಕೈ ನಿನ್ನಾ ಮೂತಿಗೆ, ನಿಲ್ಸಲೇ ನಿನ್ ಹಳೆ ರಾಗ !!

ಹೈಸ್ಕೂಲು ಪಾಸಾದೆ, ಪ್ರೇಮದಲಿ  ಫೇಲಾದೆ…
ಹೈಸ್ಕೂಲು ಪಾಸಾದೆ …
ಓಕೆ ಶಿವ !
ಸಾಕು ಶಿವ !
ಟಾಟಾ ಶಿವ !

ಮಲ್ಕೋ ಶಿವ!

Advertisements

One response to “ಹೇಳು ಶಿವ, ಲೂಸಿಯ (2013)

Subscribe to comments with RSS.

  1. Pingback: Lucia – ಲೂಸಿಯಾ (2013/೨೦೧೩) | Kannada Movies Info

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: