ಕರಗಿದ ಬಾನಿನಲ್ಲಿ – ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013)   2 comments

ಹಾಡು: ಕರಗಿದ ಬಾನಿನಲ್ಲಿ , ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013), ಗಾಯನ: ಸೌಮ್ಯ ರಾವ್ , ಸಾಹಿತ್ಯ: ಪ್ರಕಾಶ್ ಶ್ರೀನಿವಾಸ್

ಅಮಾವಾಸ್ಯೆಯಂದು ಚಂದ್ರ ಕಂಡಿದ್ದಾನೆ, ಶುಭವೋ ಅಶುಭವೋ ತಿಳಿಯದು, ಹುಣ್ಣಿಮೆಯಂದು ಈತ ಜೊತೆಗಿದ್ದಾನೆ.. ಪ್ರೀತಿಯ ಉಪಶಮನದ ಮಜಲಿದು…

sols-bike

ಕರಗಿದ ಬಾನಿನಲ್ಲಿ ಮೂಡಿ ಬಾ , ನೀ ಚಂದಿರ..
ನಸುಕಿನಾ ಕನಸಿನಲ್ಲಿ, ನಿನ್ನ ನೆನಪೇ ಸುಂದರ..
ಬಾಡಿದ ಈ ಮನ, ಬಯಸೋ ಹುಡುಗನು ನೀನಾ…
ಅರಳುವಾ ಈ ಮನ , ಮೊಗ್ಗಾದೆನಾ …
ಕಾಡು ಮಳೆಯನು… ಮಳೆಯ ನೆನಪನು… ನೆನಪ ಹಸಿವನು… ಮರೆಸು ಬಾ …
ಸಿಗುವ ಒಲವನು… ಒಲವ ಕನಸನು.. ಕನಸ ಉಡುಪನು.. ತೋಡಿಸು ಬಾ …

ಕರಗಿದ ಬಾನಿನಲ್ಲಿ ಮೂಡಿ ಬಾ , ನೀ ಚಂದಿರ..
ನಸುಕಿನಾ ಕನಸಿನಲ್ಲಿ , ನಿನ್ನ ನೆನಪೇ ಸುಂದರ..

ನೆರಳಿನ ನೆನಪನೇ , ಹೋಲುವ ಗೆಳೆಯನೆ..
ಬೆಳಗಿದೆ ಬದುಕನೇ , ಮೂಡಿಸಿ ಕಲ್ಪನೆ…
ನೀರ ಒಳಗೆ ಅಳುವ, ಮೀನು ನಾ..
ಹನಿಯ ಒರೆಸು ಬೆರಳು, ನೀನೆನ..
ನಲುಗಿ ಬಾಡೋ ಹೂವು, ನಾನದೆ..
ಮೆಲ್ಲ ಒಳಗೆ ನುಸುಳಿ, ನೀ ಬಂದೆ ..
ಹಗಲ ಶಶಿಯು ನೀನಾದೆಯ…
ಕಾಡು ಮಳೆಯನು… ಮಳೆಯ ನೆನಪನು… ನೆನಪ ಹಸಿವನು… ಮರೆಸು ಬಾ …
ಸಿಗುವ ಒಲವನು… ಒಲವ ಕನಸನು.. ಕನಸ ಉಡುಪನು.. ತೋಡಿಸು ಬಾ …

ಕರಗಿದ ಬಾನಿನಲ್ಲಿ ಮೂಡಿ ಬಾ.. ನೀ ಚಂದಿರ..
ನಸುಕಿನಾ ಕನಸಿನಲ್ಲಿ.. ನಿನ್ನ ನೆನಪೇ ಸುಂದರ..

ಚದುರಿದ ಮೋಡವ , ಕೂಡಿಸೋ ಬಿಂದುವೇ..
ನನ್ನಯ ಈ ವಿರಹ , ತೊರೆಯಲು ಸಾಧ್ಯವೇ..
ಸುರಿವ ಮಳೆಯ ಪರಿವೆ, ನನಗಿಲ್ಲ..
ನಿನ್ನ ಹೊರತು ಬೇರೆ, ಸೊಗಸಿಲ್ಲ..
ಸರಿದ ಸೂರ್ಯ ಕಿರಣ, ಬೀರೋಲ್ಲ ..
ನಿನ್ನ ಹೊಳಪ  ಮೀರೋ, ಮಿನುಗಿಲ್ಲ..
ಇರುಳ ದೀಪ ನೀನಾದೆಯ….
ಕಳೆದ ದಿನವನು … ಪಡೆದ ನೋವನು … ಕಾಡು ಮಳೆಯನು… ಮರೆಸು ಬಾ …
ಸಿಗುವ ನಗುವನು … ನಾಳೆ ಕನಸನು.. ಒಲವ ಉಡುಪನು.. ತೋಡಿಸು ಬಾ …

Advertisements

2 responses to “ಕರಗಿದ ಬಾನಿನಲ್ಲಿ – ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013)

Subscribe to comments with RSS.

  1. ಮನ ಮಿಡಿಯುವ ಗೀತೆ …ಸಾಹಿತ್ಯ ಚೆನ್ನಾಗಿದೆ… ತುಂಬಾ ಇಶ್ಟಾ ಆಯ್ತು ರೀ…. idu nanna huduganige dedicate maadta idini :)

  2. ಮಹಿಳಾ ದಿನಾಚರಣೆಯಂದು ನಿಮ್ಮ ಹುಡುಗನಿಗೆ ಸಮರ್ಪಿಸಲು ಸೂಕ್ತವಾದ ಗೀತೆ :)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: