ಚೆಂದುಟಿಯ ಪಕ್ಕದಲಿ, ಡ್ರಾಮಾ (2012)   Leave a comment

Again, Amazing Lyrics by the dreamy idealist, Mr. Yograj Bhatt!

ಚಿತ್ರ: ಡ್ರಾಮಾ (2012), ಹಾಡು: ಚೆಂದುಟಿಯ ಪಕ್ಕದಲಿ , ಸಂಗೀತ: ವೀ ಹರಿಕೃಷ್ಣ, ಗಾಯನ: ಸೋನು ನಿಗಮ್, ಸಾಹಿತ್ಯ: ಯೋಗರಾಜ್ ಭಟ್ಟ್

ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ.. , ಬರಿ ಪೋಲಿ ಕನಸ..

ಮಾಮೂಲಿಕತೆಯ ತಾರುಣ್ಯ ಗೀತೆಯಲಿ ಉತ್ತರ ಕಮ್ಮಿ, ಪ್ರಶ್ನೆಯೇ.. ಜಾಸ್ತಿ..
ದಾರೀಲಿ ಕೈ-ಕಟ್ಟಿ ನಿಂತಿರಲೇ, ಹೃದಯಾನ ಸಂಪೂರ್ಣ ಬಿಚ್ಚಿಡಲೇ ..
ಮುಂಗುರುಳ ಸ್ಪ್ರಿಂಗ್ಅಲ್ಲಿ ಜೋತಾಡಲೇ.. ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ..
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, ಎಲ್ಲ ಹೇಳಿದರು ಇನ್ನೇನು ಉಳಿದಿದೆ..

ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…

ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ ಸಿಟೊಂದ ಹಿಡಿದವನು ನಾನು..
ಇಳಿ ಸಂಜೆಯಲಿ ನಾನು ನನ್ನ ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನಿ ಸಿಕ್ಕರೂ… ಸಿಗದಿದ್ದರೂ… , ಎದೆತುಂಬ ಹಾಡುವೆನು….

ಹೇಳಿಬಿಡು ಹುಡುಗಿ ನಿ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ… , ಬರಿ ಪೋಲಿ ಕನಸ…

________________________________________________________________

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ..
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ..
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ, ತಡ ಮಾಡದೆ ಸಣ್ಣ ಮುತ್ತಿಡ್ಲ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ..

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ..
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ..

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೇನು , ಹಾಡಿ ನೋಡೆನ್ನನು ಸ್ಮೈಲ್ ಆರ್ದು ಬರಲಿ..
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ, ನೀ ಮುಡಿದ ಸಂಪಿಗೆಯ ಸ್ಮೆಲ್ ಆರ್ದು ಸಿಗಲಿ..
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ, ಬೆನ್ನಿನಲಿ ಬೆವರಾಗಿ ನಾನಿರ್ಲಾ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ..

ಚೆಂದುಟಿಯ ಪಕ್ಕದಲಿ….

ಒಮ್ಮೊಮ್ಮೆ ಯೋಚಿಸುವೆ, ಯಾತಕ್ಕೆ ನಾನದೆ ಎದೆಯೊಳಗೆ ಕುರ್ಚಿಯನು ಕೆತ್ತುವ.. ಬಡಗಿ…
ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು ಇನ್ನೆಷ್ಟು ಚೆಳಿಗಾಲ ಕಾಯೋದೇ ಹುಡುಗಿ…
ಸ್ವಪ್ನಕ್ಕೆ ಬೆಡ್ ಶೀಟು ಹೊಡ್ಚಿಇರ್ಲಾ, ಚಂದ್ರನ್ಗೆ ಮೊಂಬತ್ತಿ ಕೊಟ್ಟಿರ್ಲಾ..
ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…

ಬಿಗಿಡಿಟ್ಟ ತಂಬೂರಿ ತಂತಿಯಂಥಾಗಿರುವೆ, ತುಂಡು ಮಾಡೇನ್ನನು ಸೌಂಡ್ ಆರ್ದು ಬರಲಿ…
ನಿನ್ನ ತಲೆ ದಿಂಬಿನ ಚಿತ್ತಾರವಗಿರುವೆ, ನಿನ್ನ ಕನವರಿಕೆಯಲಿ ಒಂದಾದ್ರು ಸಿಗಲಿ..
ಸಿಗದಂಥಹ ಕೊನೆ ಸಾಲು ಬಿಟ್ಟಿಇರ್ಲಾ , ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲ…

ಒಹ್… ಇದು ಯಾವ್ದು ಹೇಳ್ದೆನೆ ಮುಚ್ಚಿಡ್ಲ…

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು, ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲ..
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ, ಅತಿ ತುಂಟ ಮಾತೊಂದ ನಾನಡ್ಲ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: